Tuesday, July 21, 2026
spot_imgspot_img
spot_imgspot_img

ತೈಲ ಅಭಾವ – ಬೀದರ್‌ನಲ್ಲಿ 7ಕ್ಕೂ ಅಧಿಕ ಪೆಟ್ರೋಲ್ ಬಂಕ್ ಬಂದ್!

- Advertisement -
- Advertisement -

ಬೀದರ್: ಇರಾನ್ ಮತ್ತು ಇಸ್ರೆಲ್ ವಾರ್ ಯುದ್ಧದ ಪರಿಣಾಮ ಗಡಿ ಜಿಲ್ಲೆ ಬೀದರ್‌ನ ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್ ಅಭಾವ ಸೃಷ್ಟಿಯಾಗಿ ಬಂಕ್‌ಗಳು ಕ್ಲೋಸ್ ಆಗಿವೆ.

ತೈಲ ಕೊರತೆ ವದಂತಿ ಹಿನ್ನೆಲೆ ಜನ ಮುಗಿಬಿದ್ದು ಪೆಟ್ರೋಲ್, ಡಿಸೇಲ್ ಖರೀದಿಸಿದ್ದು, ಬೀದರ್ ನಗರದ ಬಸವೇಶ್ವರ ವೃತದ ಬಳಿ ಇರುವ ನಯಾರಾ ಪೆಟ್ರೋಲ್ ಬಂಕ್ ಸೇರಿದಂತೆ 7ಕ್ಕೂ ಅಧಿಕ ಬಂಕ್‌ಗಳಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾಗಿ ಬಂಕ್‌ಗಳನ್ನು ಬಂದ್ ಮಾಡಲಾಗಿದೆ.

ಬುಧವಾರ ರಾತ್ರಿಯಿಂದಲೇ ಪೆಟ್ರೋಲ್, ಡಿಸೇಲ್ ಖಾಲಿಯಾಗಿದ್ದು, ಸ್ಟಾಕ್ ಇಲ್ಲದೇ ಜನರು ಪೆಟ್ರೋಲ್ ಬಂಕ್‌ಗೆ ಬಂದು ವಾಪಸ್ ಹೋಗುತ್ತಿದ್ದಾರೆ. ಮಂಗಳೂರಿನಿಂದ ಬರುವ ಪೆಟ್ರೋಲ್ ಮತ್ತು ಡಿಸೇಲ್ ಗಾಡಿ ಬಂದಿಲ್ಲಾ. ಹೀಗಾಗಿ ಬೀದರ್‌ನ ನಮ್ಮ ಬಂಕ್‌ನಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾಗಿದೆ. ಗಾಡಿ ಬಂದ ತಕ್ಷಣ ನಾವು ಪೆಟ್ರೋಲ್, ಡಿಸೇಲ್ ನೀಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ತಿಳಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!