Monday, July 20, 2026
spot_imgspot_img
spot_imgspot_img

ಶ್ರೀ ಮಹಾಮಾಯಿ ಅಮ್ಮನವರ ಕ್ಷೇತ್ರ ಮೇಗಿನಪೇಟೆ ವಿಟ್ಲ- ಕಾಲಾವಧಿ ಮಾರಿಪೂಜೆ

- Advertisement -
- Advertisement -

ವಿಟ್ಲ: ಶ್ರೀ ಮಹಾಮಾಯಿ ಅಮ್ಮನವರ ಕ್ಷೇತ್ರ ಮೇಗಿನಪೇಟೆ ಇಲ್ಲಿ ವರ್ಷಂಪ್ರತಿಯಂತೆ ನಡೆಯುವ ಕಾಲಾವಧಿ ಮಾರಿ ಪೂಜೆ ಮತ್ತು ಸ-ಪರಿವಾರ ದೈವಗಳ ತಂಬಿಲ ಸೇವೆಯು ಇಂದು ಎ.02 ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು ಎ.3ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಇಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಸಂಜೆ ಗಂಟೆ 7.30ಕ್ಕೆ ಅಮ್ಮನವರ ಸನ್ನಿಧಿಯಿಂದ ಭಂಡಾರ ತೆಗೆದು ಮಾರಿ ಕಲಕ್ಕೆ ತೆರಳುವುದು.

ಎ.03 ಗುರುವಾರ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ , ದರ್ಶನ ಸೇವೆ ಆ ಬಳಿಕ ಅನ್ನ ಸಂತರ್ಪಣೆ ನಡೆಯಲಿರುವುದು. ಸಂಜೆ ಅಮ್ಮನವರ ಭಂಡಾರ ಗುಡಿಗೆ ತೆರಳುವುದು.

ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ತನು ಮನ ಧನಗಳ ಸಹಕಾರ ನೀಡಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಮೊಕ್ತೇಸರರು ಮತ್ತು ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!