- Advertisement -
- Advertisement -




ಟೆಲ್ ಅವೀವ್, ಎ. 12: ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಆಗ್ರಹಿಸಿ, ಟೆಲ್ ಅವೀವ್ ನಲ್ಲಿ ಇಸ್ರೇಲಿನ ನೂರಾರು ನಾಗರಿಕರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರ್ಕಾರದ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು ಎಂದು Aljazeera ವರದಿ ಮಾಡಿದೆ.
ದೇಶ ನಿರಂತರ ಸಂಘರ್ಷದಲ್ಲಿ ಸಿಲುಕಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಯುದ್ಧ ಮುಂದುವರಿದರೆ ಹಾನಿ ಹೆಚ್ಚಾಗುತ್ತದೆ. “ಕದನ ನಿಲ್ಲಿಸಿ, ಮಾತುಕತೆ ಆರಂಭಿಸಿ” ಎಂದು ಘೋಷಣೆ ಕೂಗಿದರು. ಆರ್ಥಿಕವಾಗಿ ಮತ್ತು ಮಾನವೀಯವಾಗಿ ದೇಶಕ್ಕೆ ಹಾನಿಯುಂಟು ಮಾಡುತ್ತಿರುವ ಯುದ್ಧದ ನಿಲುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

- Advertisement -







