Wednesday, July 22, 2026
spot_imgspot_img
spot_imgspot_img

ಪುತ್ತೂರು ಜಾತ್ರೆಯ ವೇಳೆ ಸಾರ್ವಜನಿಕ ಶಾಂತಿ ಭಂಗ ಆರೋಪ- ಇಬ್ಬರು ಪೊಲೀಸರ ವಶಕ್ಕೆ

- Advertisement -
- Advertisement -

ಪುತ್ತೂರು: ನಗರದ ಪೇಟೆಯಲ್ಲಿ ನಡೆದ ದೇವಸ್ಥಾನದ ಜಾತ್ರೆಯ ವೇಳೆ ಸಾರ್ವಜನಿಕ ಶಾಂತಿ ಭಂಗಪಡಿಸಿದ ಆರೋಪದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದ ಘಟನೆ ಏಪ್ರಿಲ್ 20ರ ರಾತ್ರಿ ನಡೆದಿದೆ.

ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗಳು ದೇವಸ್ಥಾನದ ಕಛೇರಿ ಬಳಿ ಜನ ಗುಂಪು ಸೇರಿರುವುದನ್ನು ಗಮನಿಸಿ ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಪರಸ್ಪರ ಗಲಾಟೆ ನಡೆಸುತ್ತಾ ಸಾರ್ವಜನಿಕ ಶಾಂತಿ ಭಂಗಪಡಿಸುತ್ತಿರುವುದು ಕಂಡುಬಂದಿದೆ.ಪೊಲೀಸರು ಗಲಾಟೆ ನಿಲ್ಲಿಸುವಂತೆ ಸೂಚನೆ ನೀಡಿದರೂ ಅವರು ತಮ್ಮ ವರ್ತನೆ ಮುಂದುವರಿಸಿದ್ದರಿಂದ, ಮುಂದಿನ ಕಾನೂನು ಕ್ರಮಕ್ಕಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.ವಿಚಾರಣೆ ವೇಳೆ ಆರೋಪಿಗಳು ಪುತ್ತೂರು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29) ಮತ್ತು ಕಬಕ ನಿವಾಸಿ ಹರೀಶ್ (42) ಎಂದು ಗುರುತಿಸಲಾಗಿದೆ.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2026 ಪ್ರಕರಣ ದಾಖಲಿಸಿಕೊಂಡು, ಬಿಎನ್ಎಸ್ 2023ರ ಕಲಂ 194(2)ರಂತೆ ತನಿಖೆ ಮುಂದುವರಿಸಲಾಗಿದೆ.

- Advertisement -

Related news

error: Content is protected !!