Tuesday, July 21, 2026
spot_imgspot_img
spot_imgspot_img

ತ್ರಿಶೂರ್: ಮುಂಡತಿಕೋಡ್‌ನಲ್ಲಿ ಪಟಾಕಿ ತಯಾರಿಕಾದಲ್ಲಿ ಸ್ಫೋಟ : 13 ಮಂದಿ ಸಾವು : ಹಲವರಿಗೆ ಗಾಯ -ಮೃತರ ಸಂಖ್ಯೆ ಹೆಚ್ಚಲು ಸಾಧ್ಯತೆ

- Advertisement -
- Advertisement -

ತ್ರಿಶೂರ್, ಎ.21: ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತಿಕೋಡ್‌ನಲ್ಲಿ ಪಟಾಕಿ ತಯಾರಿಕಾ ಕಟ್ಟಡವೊಂದರಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸ್ಫೋಟದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸುಮಾರು 70 ಮಂದಿ ಇದ್ದರೆಂದು ಹೇಳಲಾಗಿದೆ. ಅವರೆಲ್ಲರಿಗೂ ಸುಟ್ಟ ಗಾಯಗಳಾಗಿದ್ದು, ಹಲವರ ಪರಿಸ್ಥಿತಿ ಗಂಭೀರವಾಗಿದೆ.

ಸಾಂದರ್ಭಿಕ ಚಿತ್ರ

ತಿರುವಂಬಾಡಿ ದೇವಸ್ಥಾನದಲ್ಲಿ ಕೆಲವೇ ದಿನಗಳಲ್ಲಿ ನಡೆಯಬೇಕಾಗಿದ್ದ ಉತ್ಸವಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೇವಸ್ಥಾನದಲ್ಲಿ ‘ತ್ರಿಶೂರ್ ಪೂರಂ’ ಎಂಬ ಹೆಸರಿನ ಉತ್ಸವ ಎಪ್ರಿಲ್ 26ರಂದು ನಡೆಯಲಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.ಸ್ಫೋಟವು ಅಪರಾಹ್ನ ಸುಮಾರು 3:30ಕ್ಕೆ ಸಂಭವಿಸಿತು ಹಾಗೂ ದಟ್ಟ ಹೊಗೆ ಆ ಪ್ರದೇಶವನ್ನು ಆವರಿಸಿತು. ಅಲ್ಲಿ ಬಳಿಕ ಹಲವು ಸಣ್ಣ ಸ್ಫೋಟಗಳ ಸದ್ದು ಕೇಳಿತು. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು. ಮೃತಪಟ್ಟವರ ಸಮೀಪದ ಬಂಧುಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಗಾಯಾಳುಗಳು ತಲಾ 50,000 ರೂ. ಪರಿಹಾರ ಸ್ವೀಕರಿಸಲಿದ್ದಾರೆ.ಗಾಯಗೊಂಡವರಿಗೆ ಎಲ್ಲಾ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಂಭೀರ ಸುಟ್ಟ ಗಾಯಗಳಿಗೊಳಗಾದವರ ಚಿಕಿತ್ಸೆಗೆ ಅಗತ್ಯವಿದ್ದರೆ ರಾಜ್ಯದ ಹೊರಗಿನ ಪರಿಣತ ವೈದ್ಯರ ಸೇವೆಗಳನ್ನು ಬಳಸಿಕೊಳ್ಳಬೇಕು ಎಂಬ ಸೂಚನೆಯನ್ನು ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.ಭತ್ತದ ಗದ್ದೆಗಳಲ್ಲಿ ಪಟಾಕಿ ತಯಾರಿಕೆ:ಭತ್ತದ ಗದ್ದೆಗಳ ನಡುವಿನ ಸ್ಥಳವೊಂದರಲ್ಲಿ ನಿರ್ಮಿಸಲಾಗಿರುವ ಹಲವು ತಾತ್ಕಾಲಿಕ ಶೆಡ್‌ಗಳಲ್ಲಿ ದೇವಸ್ಥಾನಕ್ಕಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿತ್ತು. ಸ್ಫೋಟ ಸಂಭವಿಸಿದ ಕಟ್ಟಡದಲ್ಲಿ ಸುಮಾರು 2,000 ಕೆಜಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿಡಲಾಗಿತ್ತು ಎನ್ನಲಾಗಿದೆ.ಬೃಹತ್ ಸ್ಫೋಟದ ಬಳಿಕ, ಸಣ್ಣ ಸ್ಫೋಟಗಳು ಆಗಾಗ ನಡೆದಿವೆ ಹಾಗೂ ಇದರಿಂದಾಗಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ವಡಕಂಚೇರಿ ಮುನ್ಸಿಪಾಲಿಟಿ ಅಧ್ಯಕ್ಷ ಪಿ.ಎನ್. ಸುರೇಂದ್ರನ್ ತಿಳಿಸಿದರು.”ಶೆಡ್‌ನಲ್ಲಿ ಎಷ್ಟು ಮಂದಿ ಇದ್ದರು ಮತ್ತು ಎಷ್ಟು ಮಂದಿ ಗಾಯಗೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ತೀವ್ರ ಬಿಸಿಲು ಈ ಘಟನೆಗೆ ಒಂದು ಕಾರಣ ಆಗಿರಬಹುದು ಎಂದು ಭಾವಿಸಲಾಗಿದೆ” ಎಂದು ಅವರು ಹೇಳಿದರು.ಸ್ಫೋಟದ ಸದ್ದು ಹಲವು ಕಿಲೋಮೀಟರ್ ದೂರದಲ್ಲೂ ಕೇಳಿಸಿದೆ ಎಂದು ಹೇಳಿದ ಅವರು, ಸಮೀಪದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದರು.

- Advertisement -

Related news

error: Content is protected !!