Wednesday, July 22, 2026
spot_imgspot_img
spot_imgspot_img

ನವದೆಹಲಿ: ಟೇಕಾಫ್ ವೇಳೆ ಎಂಜಿನ್ ವೈಫಲ್ಯದಿಂದ ಸ್ವಿಸ್ ವಿಮಾನದಲ್ಲಿ ಬೆಂಕಿ–6 ಮಂದಿಗೆ ಗಾಯ

- Advertisement -
- Advertisement -

ನವದೆಹಲಿ: ಟೇಕಾಫ್ ವೇಳೆ ಎಂಜಿನ್ ವೈಫಲ್ಯದಿಂದ ಸ್ವಿಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 6 ಮಂದಿ ಗಾಯಗೊಂಡಿರುವ ಘಟನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ದೆಹಲಿಯಿಂದ ಜ್ಯೂರಿಚ್‌ಗೆ ತೆರಳಬೇಕಿದ್ದ ‘ಸ್ವಿಸ್’ ವಿಮಾನಯಾನ ಸಂಸ್ಥೆಯ ಏರ್‌ಬಸ್ ವಿಮಾನ (A330) ಭಾನುವಾರ ಬೆಳಗ್ಗೆ ಟೇಕಾಫ್ ಆಗಲು ರನ್‌ವೇ ಮೇಲೆ ಚಲಿಸುತ್ತಿತ್ತು. ಈ ವೇಳೆ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಪೈಲಟ್ ವಿಮಾನವನ್ನು ನಿಲ್ಲಿಸಿ ತುರ್ತು ದ್ವಾರ ತೆರೆದು ಸ್ಲೈಡ್‌ಗಳ ಮೂಲಕ ಪ್ರಯಾಣಿಕರನ್ನು ರನ್‌ವೇಯಲ್ಲಿ ಇಳಿಸಲಾಯಿತು.

ವಿಮಾನದಿಂದ ಇಳಿಯುವಾಗ 6 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ 228 ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!