Tuesday, July 21, 2026
spot_imgspot_img
spot_imgspot_img

ಮಲ್ಪೆ ಬಂದರಿನಲ್ಲಿ ಹೊಡೆದಾಟ: 2 ಪ್ರತ್ಯೇಕ ಪ್ರಕರಣಗಳು ದಾಖಲು

- Advertisement -
- Advertisement -

ಉಡುಪಿ, ಎ.30: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮೀನುಗಾರರ ಎರಡು ತಂಡಗಳ ನಡುವೆ ಮಲ್ಪೆ ಬಂದರಿನಲ್ಲಿ ಗುರುವಾರ ಹೊಡೆದಾಟ ನಡೆದಿದೆ.

ಬಾಕಿ ಇರುವ ದೊಡ್ಡ ಮೊತ್ತದ ಹಣವನ್ನು ವಾಪಾಸು ಕೇಳಿದ ವಿಷಯಕ್ಕೆ ಜಯೇಶ್ ಕೋಟ್ಯಾನ್ ಎಂಬಾತ ಬೋಟು ಮಾಲಕ ಛೋಟಾ ಹರೀಶ್ ಎಂಬಾತನಿಗೆ ಮಲ್ಪೆ ಬಂದರಿನಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ. ಇಬ್ಬರ ನಡುವೆ ಹೊಡೆದಾಟ ನಡೆದಿದೆ.ಇಬ್ಬರೂ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಬಳಿಕ ನಾಲ್ವರು ಛೋಟಾ ಹರೀಶ್ ಬೆಂಬಲಿಗರು ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ, ಜಯೇಶ್‌ಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

- Advertisement -

Related news

error: Content is protected !!