- Advertisement -
- Advertisement -
ಬೆಂಗಳೂರು: ನಗರದಲ್ಲಿ ಖೋಟಾ ನೋಟು ತಯಾರು ಮಾಡುತ್ತಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಪಾದರಾಯನಪುರ ನಿವಾಸಿ ಗುಂಡು ಅಲಿಯಾಸ್ ಇಮ್ರಾನ್ ಬಂಧಿತ ಆರೋಪಿ.

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆರೋಪಿಯ ಬಂಧನವಾಗಿದೆ. ನಿನ್ನೆ ಆಟೋದಲ್ಲಿ ಪ್ರಯಾಣ ಮಾಡಿದ್ದ ಜಮಾಲ್ ಎಂಬಾತ ₹100ರ ಮುಖ ಬೆಲೆಯ ಖೋಟಾ ನೋಟು ನೀಡಿದ್ದ. ಅನುಮಾನಗೊಂಡ ಆಟೋ ಚಾಲಕ ನೋಟು ಸಹಿತ ಆರೋಪಿಯನ್ನು ಠಾಣೆಗೆ ಕರೆ ತಂದಿದ್ದ. ನೋಟು ಪರಿಶೀಲನೆ ವೇಳೆ ಖೋಟಾ ನೋಟು ಎಂಬುದು ಪತ್ತೆಯಾಗಿದೆ. ಇನ್ನು ಆರೋಪಿ ಜಮಾಲ್ ಹೇಳಿಕೆ ಮೇಲೆ ಇಂದು ಇಮ್ರಾನ್ನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯಿಂದ ನಕಲಿ ನೋಟು ತಯಾರು ಮಾಡುವ ಯಂತ್ರ 2,000 ಹಾಗೂ 200 ಸೇರಿದಂತೆ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೆಂಗಳೂರಿನ 4 ಕಡೆ ನೋಟು ತಯಾರು ಮಾಡುತ್ತಿದ್ದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದ್ದು, ವಿಲ್ಸನ್ ಗಾರ್ಡನ್ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದಾರೆ.

- Advertisement -








