Thursday, June 18, 2026
spot_imgspot_img
spot_imgspot_img

ಮಂಗಳೂರು: ಲಯನ್ಸ್ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ಲಯನ್ಸ್ ಕ್ಲಬ್ ನ ಹೆಮ್ಮೆಯ ಸದಸ್ಯ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಲಯನ್ ಯು.ಟಿ. ಖಾದರ್ ಅವರಿಗೆ ಲಯನ್ಸ್ ಸದಸ್ಯರ ಪರವಾಗಿ, ಲಯನ್ಸ್ ಜಿಲ್ಲೆಯ ಪರವಾಗಿ ಹಾಗೂ ಲಯನ್ಸ್ ಕ್ಲಬ್ ಮಂಗಳಗಂಗೋತ್ರಿ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಜೂನ್ 19 ಶುಕ್ರವಾರದಂದು ಬೆಳಿಗ್ಗೆ 10.30 ಗಂಟೆಗೆ ಅಸೈಗೋಳಿಯ ಲಯನ್ಸ್ ಸೇವಾ ಸದನದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಲಯನ್ಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ್ ಶೆಣೈ ಹಾಗೂ ಮಾಜಿ ರಾಜ್ಯಪಾಲರಾದ ದೇವದಾಸ್ ಭಂಡಾರಿ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಲಯನ್ಸ್ ಜಿಲ್ಲೆಯ ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!