- Advertisement -
- Advertisement -






ಪುತ್ತೂರು: ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ಪುತ್ತೂರು ಉಪ ವಿಭಾಗದ ವತಿಯಿಂದ “ಫಿಟ್ ಇಂಡಿಯಾ – ಮಾದಕ ದ್ರವ್ಯ ಮುಕ್ತ – ಮ್ಯಾರಥಾನ್ 5K” ಅನ್ನು ಆಯೋಜಿಸಲಾಗಿದೆ.
ಜೂನ್ 26 ಶುಕ್ರವಾರದಂದು ಬೆಳಿಗ್ಗೆ 6 ಗಂಟೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಬೃಹತ್ ಮ್ಯಾರಥಾನ್‌ಗೆ ಚಾಲನೆ ದೊರೆಯಲಿದೆ.
ಮ್ಯಾರಥಾನ್ ಮಾರ್ಗ:
ಈ ಜಾಗೃತಿ ಓಟವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಪ್ರಾರಂಭವಾಗಿ, ದರ್ಬೆ ವೃತ್ತ ಮತ್ತು ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಮೂಲಕ ಸಾಗಿ, ಪುನಃ ದೇವಸ್ಥಾನದ ಮೈದಾನಕ್ಕೆ ಬಂದು ಮುಕ್ತಾಯಗೊಳ್ಳಲಿದೆ.
ಉಚಿತ ಪ್ರವೇಶ ಮತ್ತು ನೋಂದಣಿ ವಿವರ:
- *ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಎಲ್ಲಾ ಮಹಿಳೆಯರು ಹಾಗೂ ಪುರುಷರಿಗೆ ಉಚಿತ ಪ್ರವೇಶವಿರುತ್ತದೆ.
- *ಆಸಕ್ತರು ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.
*ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ನೋಂದಣಿ ಲಿಂಕ್ ಅನ್ನು ಕೂಡ ಒದಗಿಸಲಾಗಿದ್ದು, ಈ ಕೆಳಗಿನ ಲಿಂಕ್ ಬಳಸಿ ನೋಂದಾಯಿಸಿಕೊಳ್ಳಬಹುದು: https://forms.gle/3UKZUXEmnTpws7qK8
- ನೋಂದಣಿಗೆ ಕೊನೆಯ ದಿನಾಂಕ:
- 25-06-2026 ರಂದು ಸಂಜೆ 6 ಗಂಟೆಗೆ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಮತ್ತು ಆರೋಗ್ಯವಂತ ಭಾರತಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು, ಯುವಜನರು, ಸಂಘ ಸಂಸ್ಥೆಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.
- Advertisement -








