Wednesday, June 24, 2026
spot_imgspot_img
spot_imgspot_img

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ ಸ್ವಾಗತ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ: ಜೂನ್ 23 ರಂದು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ 2026-27ನೇ ಸಾಲಿನ ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳಿಗೆ ಆಗತ ಸ್ವಾಗತ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಕಾರ್ಯಕ್ರಮಕ್ಕೆ ಬಂದಿರುವಂತಹ ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲನೆ ಮತ್ತು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದವರು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಹಾಗೂ ಮಾರ್ಗದರ್ಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರ ಅಧ್ಯಕ್ಷೀಯ ಮಾತುಗಳಲ್ಲಿ” ಶಿಕ್ಷಣದ ಜೊತೆ ಸಂಸ್ಕಾರ ಅಗತ್ಯ, ಜ್ಞಾನದ ಮೂಲ ಭಾರತ ಅದು ನಮಗೆ ಮಾದರಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದವರು ಶಾಂತರಾಮ ಬುದ್ನಾ ಸಿದ್ದಿ (ಶಿರಸಿ, ಉತ್ತರ ಕನ್ನಡದ ವಿಧಾನ ಪರಿಷತ್ ಸದಸ್ಯರು) ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸಮಾಜವು ನಮಗೆ ಎಲ್ಲವನ್ನು ನೀಡಿದೆ ನಮ್ಮಿಂದ ಸಮಾಜಕ್ಕೆ ಏನಾದರೂ ನೀಡುವ ಪ್ರಜೆಗಳಾಗಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ದಿವಾಕರ ದಾಸ್ (ಚೈರ್‌ಮ್ಯಾನ್ ಮೆ/ಎಸ್.ಎಲ್.ವಿ. ಗ್ರೂಪ್, ಮೈಸೂರು) ನಿತೀಶ್ ಗೌಡ (ಮ್ಯಾನೇಜಿಂಗ್ ಪಾರ್ಟನರ್ ಬನ್ಯಾನ್ ಎಂಟರ್‌ಪ್ರೈಸಸ್, ಚಿಕ್ಕಮಗಳೂರು) ಶ್ರೀಮತಿ ಮೋನಿಶಾ ನರಸಿಂಹ ಮೂರ್ತಿ ಚಿಕ್ಕಮಗಳೂರು , ಶ್ರೀಮತಿ ನಾಗರತ್ನ ವಿಷ್ಣು ಹೆಬ್ಬಾರ್ (ಸ್ಥಾಪಕರು ಬೇಕಲ ಗೋಕುಲಂ ಗೋಶಾಲೆ ಪರಂಪರಾ ವಿದ್ಯಾಪೀಠಂ, ಅಲಕೋಡ್, ಕೇರಳ) ಶ್ಸಂಜಯ್ ಮೇಲಾಂಟ(ಉದ್ಯಮಿ) ವಿಶ್ವಾಸ ರಾವ್ (ಸಾವಿತ್ರಿ ಮೆಮೊರಿಯಲ್ ಟ್ರಸ್ಟ್ ಮಂಗಳೂರು) ವಿಟಿವಿ ಆಡಳಿತ ನಿರ್ದೇಶಕ, ರಾಮದಾಸ್ ಶೆಟ್ಟಿ ವಿಟ್ಲ , ಉಪಸ್ಥಿತರಿದ್ದರು.

ವೇದಿಕೆಯಲ್ಲಿ (ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಣಿ ಸದಸ್ಯರು) ಡಾ. ಕಮಲ ಪ್ರಭಾಕರ್ ಭಟ್ , ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಎಂ ಮತ್ತು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಘೃತಾಹುತಿಯನ್ನು ಮಾಡಿ, ಭಾರತಾಂಬೆಗೆ ಪುಷ್ಪಾರ್ಚನೆ ಮತ್ತು ಹಿರಿಯರಿಂದ ತಿಲಕ ಧಾರಣೆ ಯೊಂದಿಗೆ ಆಶೀರ್ವಾದ ಪಡೆದರು.

2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭುವಿ ಗೀತೆಯನ್ನು ಹಾಡಿದಳು, ತೃಪ್ತಿ ನಿರೂಪಿಸಿ, ಭೂಮಿಕಾ ಸ್ವಾಗತಿಸಿ, ಪೂಜಿತ ವಂದಿಸಿ, ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

- Advertisement -

Related news

error: Content is protected !!