
ಮಂಗಳೂರು : ಬಾಲಕಿಯ ಆತ್ಮಹತ್ಯೆಗೆ ಕಾರಣನಾದ ಆರೋಪಿ ಗಂಜಿಮಠ ಮೂಲದ ಮನೀಶ್ ಪೂಜಾರಿ ಎಂಬಾತನನ್ನು ಘಟನೆ ನಡೆದ ದಿನದಂದೇ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.ಈ ಪ್ರಕರಣದಲ್ಲಿ ಡಿಎನ್‌ಎ ಪುರಾವೆಗಳಿವೆ. ಇದು ಶಿಕ್ಷೆಗೆ ಕಾರಣವಾಗುತ್ತದೆ. ಪೊಲೀಸರು ತನಿಖೆಯನ್ನು ಮುಂದುವರಿಸುತ್ತಿದ್ದಾರೆ. ಈ ಮಧ್ಯೆ ಕೆಲವು ವಿಭಾಗಗಳು ಬಾಲಕಿಯ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿವೆ.
ಇಲ್ಲಿ ಅಪರಾಧ ಪ್ರಕರಣಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರಲ್ಲಿ ಮೂಲಭೂತ ವಿರೋಧಾಭಾಸಗಳಿವೆ. ಆರೋಪಿ ಇನ್ನೊಂದು ಸಮುದಾಯಕ್ಕೆ ಸೇರಿದವನಾಗಿದ್ದಾಗ ನ್ಯಾಯಕ್ಕಾಗಿ ಬೇಗನೆ ಒತ್ತಾಯಿಸಲಾಗುತ್ತದೆ. ಆರೋಪಿ ಸ್ವ ಸಮುದಾಯದ ವ್ಯಕ್ತಿ ಆದಾಗ ಮೌನ ವಹಿಸುವುದು ಯಾತಕ್ಕೆ? ಈ ಆಕ್ರೋಶಗಳು ಬಲಿಪಶುಗಳ ನಿಜವಾದ ರಕ್ಷಣೆಗಿಂತ ಕೋಮು ಸೂಕ್ಷ್ಮತೆಯನ್ನು ತೋರಿಸುತ್ತದೆ. ನಾವು ನಿಜವಾಗಿಯೂ ನ್ಯಾಯಕ್ಕಾಗಿ ಬದ್ಧರಾಗಿದ್ದರೆ ಎಲ್ಲಾ ಆರೋಪಿಗಳನ್ನು ಒಂದೇ ಮಾನದಂಡದಲ್ಲಿ ನೊಡಬೇಕು. ಅಪರಾಧವು ಸಾರ್ವತ್ರಿಕ ಸಮಸ್ಯೆಯಾಗಿದೆ. ಅಪರಾಧಿಗಳು ಎಲ್ಲೆಡೆ ಇದ್ದಾರೆ ಎಂಬ ವಾಸ್ತವದಿಂದ ಯಾವ ಸಮುದಾಯ ಕೂಡ ಹೊರತಾಗಿಲ್ಲ ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.








