Monday, June 29, 2026
spot_imgspot_img
spot_imgspot_img

ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡು ತಂದೆ ತಾಯಿಯನ್ನು ಮನೆಯಿಂದ ಹೊರ ಹಾಕಿದ ಪುತ್ರ: ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಮಲ್ಪೆ: ಒತ್ತಾಯಪೂರ್ವಕವಾಗಿ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಂಡ ಮಗ, ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾನಿಡಿಯೂರು ಗ್ರಾಮದ ಸರಸು ಸುವರ್ಣ(69) ಎಂಬವರು ತನ್ನ ಎರಡನೇ ಮಗ ವಿನೋದ ಸುವರ್ಣ ಜೊತೆ ವಾಸವಾಗಿದ್ದು, ಮನೆ ಸರಸು ಸುವರ್ಣ ಅವರ ಹೆಸರಿನಲ್ಲಿತ್ತು. ಈ ಮನೆಯನ್ನು ವಿನೋದ ಸುವರ್ಣ ತನ್ನ ಹೆಸರಿಗೆ ಮಾಡಿಕೊಡಿ ಎಂದು ಹೇಳಿದಾಗ ಸರಸು ಸುವರ್ಣ ಮಾಡಿಕೊಡುವುದಿಲ್ಲ ಎಂದು ಹೇಳಿದ್ದು, ಅದಕ್ಕೆ ಸರಸು ಸುವರ್ಣ ಮತ್ತು ಅವರ ಗಂಡನಿಗೂ ವಿನೋದ್ ಸುವರ್ಣ ಕೈಯಿಂದ ಹೊಡೆದು ಹಲ್ಲೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.ನಂತರ ಒತ್ತಾಯಪೂರ್ವಕವಾಗಿ ರಿಜಿಸ್ಟರ್ ಕಚೇರಿಗೆ ಕರೆದುಕೊಂಡು ಹೋಗಿ ಸರಸು ಸುವರ್ಣರ ಹೆಸರಿನಲ್ಲಿದ್ದ 11 ಸೆಂಟ್ಸ್ ಜಾಗ ಮತ್ತು ಮನೆಯನ್ನು ವಿನೋದ ಸುವರ್ಣ ತನ್ನ ಹೆಸರಿಗೆ ಮಾಡಿಕೊಂಡಿದ್ದು ನಂತರ ಈ ವಿಷಯ ವನ್ನು ಯಾರಿಗೂ ಹೇಳಿಬಾರದಾಗಿ ಬೆದರಿಕೆ ಹಾಕಿದ್ದನು.

ಈ ವಿಚಾರವಾಗಿ ಸರಸು ಸುವರ್ಣ ಕುಂದಾಪುರ ಉಪ ವಿಭಾಗಾಧಿಕಾರಿಗಳ ಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದು, ಈ ವಿಚಾರ ತಿಳಿದ ವಿನೋದ್, ಸರಸು ಸುವರ್ಣ ಮತ್ತು ಅವರ ಗಂಡ ದಾಸು ತಿಂಗಳಾಯ ಮತ್ತು ಮಗಳು ವಿನುತರನ್ನು ಮನೆಯಿಂದ ಹೊರಗೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!