Sunday, July 12, 2026
spot_imgspot_img
spot_imgspot_img

ಹುಡುಗಿ ಮದುವೆ ವಿಚಾರಕ್ಕೆ ಗಲಾಟೆ: ಕಡಬದಲ್ಲಿ ಪರಸ್ಪರ ದೂರು, ಎರಡು ಪ್ರಕರಣ ದಾಖಲು

- Advertisement -
- Advertisement -

ಕಡಬ: ಹುಡುಗಿಯೊಬ್ಬಳ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಇಬ್ಬರು ಪರಸ್ಪರ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಕಡಬ ನಿವಾಸಿ ಮೋನಿಷ್ (21) ನೀಡಿದ ದೂರಿನ ಪ್ರಕಾರ, ಜುಲೈ 10ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾಲೇಜು ರಸ್ತೆಯ ಜಂಕ್ಷನ್ ಬಳಿ ಶರತ್, ದೀಪಕ್ ಹಾಗೂ ವಿಶ್ವನಾಥ ಎಂಬವರು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 84/2026ರಡಿ ವಿವಿಧ ಬಿಎನ್‌ಎಸ್ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಇದೇ ಘಟನೆಗೆ ಸಂಬಂಧಿಸಿದಂತೆ ಕುಟ್ರುಪ್ಪಾಡಿ ನಿವಾಸಿ ದೀಪಕ್ (33) ಅವರು ಪ್ರತಿದೂರು ನೀಡಿ, ಮೋನಿಷ್ ತಮ್ಮನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅ.ಕ್ರ. 85/2026ರಡಿ ಮತ್ತೊಂದು ಪ್ರಕರಣ ದಾಖಲಾಗಿದೆ.ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಕಡಬ ಪೊಲೀಸರು ತನಿಖೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!