Tuesday, July 21, 2026
spot_imgspot_img
spot_imgspot_img

ಸಿಕ್ಕಿಂ: ನಿರ್ಮಾಣ ಹಂತದ ಸುರಂಗ ಕುಸಿತ – ಏಳು ಮಂದಿ ಸಾವು, ಹಲವರು ಸಿಲುಕಿರುವ ಶಂಕೆ

- Advertisement -
- Advertisement -

ಗ್ಯಾಂಗ್ಟಾಕ್: ನಿರ್ಮಾಣ ಹಂತದ ಸುರಂಗ ಕುಸಿದು ಏಳು ಮಂದಿ ಮೃತಪಟ್ಟ ಘಟನೆ ಸಿಕ್ಕಿಂನ ನಾಮ್ಚಿ ಜಿಲ್ಲೆಯಲ್ಲಿ ನಡೆದಿದೆ.

ಸಮರ್ಡುಂಗ್(ಜೋಲುಂಗೆ) ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದರಲ್ಲಿ ಭೂಕುಸಿತ ಹಾಗೂ ಮೀಥೇನ್ ಅನಿಲ ಸ್ಫೋಟ ಸಂಭವಿಸಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಕನಿಷ್ಠ 7 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ.

ಸಿಕ್ಕಿಂ ಜಿಲ್ಲಾಡಳಿತದ ಪ್ರಕಾರ, ಇದುವರೆಗೆ 7 ಶವಗಳನ್ನು ಹೊರತೆಗೆಯಲಾಗಿದ್ದು, ಸಿಂಗ್ತಾಮ್, ಗ್ಯಾಂಗ್ಟಾಕ್ ಮತ್ತು ನಾಮ್ಚಿ ಜಿಲ್ಲಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಸುರಂಗದೊಳಗೆ ಅಂದಾಜು 18 ರಿಂದ 27 ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆಯಿದ್ದು, ಪ್ರಸ್ತುತ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಸುರಂಗದೊಳಗೆ ಸುಮಾರು 1.5 ಕಿ.ಮೀ ಆಳದಲ್ಲಿ ನೈಸರ್ಗಿಕವಾಗಿ ರೂಪುಗೊಂಡಿದ್ದ ಅಪಾಯಕಾರಿ ಮೀಥೇನ್ ಅನಿಲ ಶೇಖರಣೆಯಾಗಿತ್ತು. ಅದನ್ನು ಹೊರಹಾಕುವ ಯತ್ನದ ವೇಳೆ ಸ್ಫೋಟ ಸಂಭವಿಸಿ ಭೂಕುಸಿತ ಉಂಟಾಗಿದೆ. ಇದರಿಂದ ಸುರಂಗದ ಪ್ರವೇಶ ದ್ವಾರ ಸಂಪೂರ್ಣ ಬಂದ್ ಆಗಿದೆ.

ಸುರಂಗದಲ್ಲಿ ಆಮ್ಲಜನಕದ ಅಭಾವ, ದಟ್ಟ ಹೊಗೆ ಮತ್ತು ವಿಷಕಾರಿ ಅನಿಲದ ಪ್ರಮಾಣ ಹೆಚ್ಚಾಗಿರುವುದರಿಂದ ರಕ್ಷಣಾ ಸಿಬ್ಬಂದಿಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಗ್ಯಾಸ್ ಮಾಸ್ಕ್ ಮತ್ತು ವಿಶೇಷ ಉಪಕರಣಗಳನ್ನು ಧರಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.

ಈ ಸುರಂಗವು ರಾಷ್ಟ್ರೀಯ ಜಲವಿದ್ಯುತ್ ನಿಗಮದ ‘ತೀಸ್ತಾ ಸ್ಟೇಜ್-6’ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ್ದಾಗಿದೆ.

- Advertisement -

Related news

error: Content is protected !!