Tuesday, July 21, 2026
spot_imgspot_img
spot_imgspot_img

2026-27 ರ ಕಂಬಳದ ಅಧಿಕೃತ ವೇಳಾಪಟ್ಟಿ ಪ್ರಕಟ- ಪುತ್ತೂರು,ಉಪ್ಪಿನಂಗಡಿ ಕಂಬಳ ಯಾವಾಗ? ಇಲ್ಲಿದೆ ಡಿಟೇಲ್ಸ್..!

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ 2026-27ನೇ ಸಾಲಿನ ಕಂಬಳದ ಅಧಿಕೃತ ವೇಳಾಪಟ್ಟಿ ಬಿಡುಗಡೆಗೊಂಡಿದೆ. ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ಜು.20ರಂದು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

2027ರ ಜನವರಿ 30ರಂದು ಪುತ್ತೂರಿನ ಕೋಟಿಚೆನ್ನಯ ಜೋಡುಕರೆ ಕಂಬಳ ಹಾಗೂ ಮಾರ್ಚ್ 27ರಂದು ಉಪ್ಪಿನಂಗಡಿಯ ವಿಜಯ ವಿಕ್ರಮ ಕಂಬಳ ನಡೆಯಲಿದೆ.

ಅ.18,19ರಂದು ಮೈಸೂರು ಕಂಬಳ: ಈ ಬಾರಿ ಮೈಸೂರು ದಸರಾ ಅಂಗವಾಗಿ ಕಂಬಳ ಆಯೋಜಿಸಿದ್ದು ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಕಂಬಳ ನಡೆಯಲಿದೆ. ಈ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ಕಂಬಳ ಸೀಸನ್ ಆರಂಭವಾಗಲಿದೆ. ಕೊನೆಯ ಕಂಬಳ ಮೇ1ರಂದು ಕಡಂದಲೆಯಲ್ಲಿ ನಡೆಯಲಿದೆ.

ಕಂಬಳ ನಡೆಯುವ ದಿನಗಳ ವಿವರ

ಅ.18: ಮೈಸೂರು

ನ.7: ಪಣಪಿಲ

ನ.14: ಸಾಣೂರು

ನ.21: ಕೊಡಂಗೆ

ನ.28: ಕಕ್ಕೆಪದವು

ಡಿ.5: ಹೊಕ್ಕಾಡಿಗೋಳಿ

ಡಿ.6: ಬಳ್ಳಮಂಜ

ಡಿ.12: ಬಾರಡಿ ಬೀಡು

ಡಿ.19: ಮಂಗಳೂರು

ಡಿ.26: ಮೂಲ್ಕಿ

ಜ.2: ಮೀಯಾರು

5

ಜ.9: ನರಿಂಗಾನ

ಜ.16: ಅಡ್ವೆ

ಜ.23: ಮೂಡುಬಿದಿರೆ

ಜ.30: ಪುತ್ತೂರು

ಫೆ.6: ಐಕಳ

ಫೆ.13: ಜೆಪ್ಪು

ಫೆ.20: ವಾಮಂಜೂರು

ಫೆ.27: ಎರ್ಮಾಳು

ಮಾ.6: ಬಂಟ್ವಾಳ

ಮಾ.13: ಬಂಗಾಡಿ

ಮಾ.20: ವೇಣೂರು

ಮಾ.27: ಉಪ್ಪಿನಂಗಡಿ

ಎ.3: ಗುರುಪುರ

ಎ.10: ಬಳ್ಳುಂಜೆ

ಎ.17: ಹರೇಕಳ

ಎ.24: 80 ಬಡಗಬೆಟ್ಟು

ಮೇ 1: ಕಡಂದಲೆ

- Advertisement -

Related news

error: Content is protected !!