- Advertisement -
- Advertisement -



ವಿಟ್ಲ :ವಿಶ್ವ ಹಿಂದೂ ಪರಿಷದ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಟ್ಲ ಇದರ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಪಶು ಚಿಕಿತ್ಸಕ ಈಶ್ವರ ಭಟ್ ಕಾಶಿಮಠ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ, ಜಗನ್ನಾಥ ಕಾಸರಗೋಡು, ಸ್ಥಾಯಿ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಗೌಡ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ರಾಮದಾಸ್ ಶೆಣೈ, ಅಧ್ಯಕ್ಷ ಜಗದೀಶ್ ಪಾಣೆಮಜಲು, ಕಾರ್ಯದರ್ಶಿ ಜೀವನ್ ಕೂಜಪ್ಪಾಡಿ, ಕೋಶಾಧಿಕಾರಿ ಮನೋಜ್ ಕಾಶಿಮಠ, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
- Advertisement -








