Thursday, August 6, 2026
spot_imgspot_img
spot_imgspot_img

ಸಂಪಾಜೆಯಲ್ಲಿ ಕಾಡು ಪ್ರಾಣಿ ಬೇಟೆ: 12 ಕೆಜಿ ಮಾಂಸದೊಂದಿಗೆ ಇಬ್ಬರು ಅರಣ್ಯ ಇಲಾಖೆಯ ವಶಕ್ಕೆ

- Advertisement -
- Advertisement -

ಸುಳ್ಯ: ಸಂಪಾಜೆಯ ಬಳಿ ಕಾಡು ಪ್ರಾಣಿಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿ ಮಾಂಸ ಮಾಡಿದ ಇಬ್ಬರು ಆರೋಪಿಗಳನ್ನು ಹಾಗೂ ಇಕೋ ಕಾರನ್ನು ಕೊಡಗು ಸಂಪಾಜೆ ಅರಣ್ಯ ಇಲಾಖೆ ವಶಕ್ಕೆ ಪಡೆದ ಘಟನೆ ಆ.5 ರಂದು ಸಂಜೆ ನಡೆದಿದೆ.

ಕಲ್ಲುಗುಂಡಿಯ ಕಾಡುಪಂಜ ಬಳಿಯ ಅರಣ್ಯದಲ್ಲಿ ಇಬ್ಬರು ಆರೋಪಿಗಳಾದ ಚೆಂಬು ಗ್ರಾಮದ ಗೌತಮ್ ಹಾಗೂ ಪೆರಾಜೆಯ ಶರತ್ ಎಂಬವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೂ ಆರೋಪಿಗಳ ಕೈಯಲ್ಲಿ 12ಕೆಜಿ ಮಾಂಸ ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!