Saturday, August 8, 2026
spot_imgspot_img
spot_imgspot_img

ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು

- Advertisement -
- Advertisement -

1.50 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಲಾಕ್

ಬೆಂಗಳೂರು : ಗುತ್ತಿಗೆದಾರರೊಬ್ಬರಿಂದ 1.50 ಲಕ್ಷ ಲಂಚ ಪಡೆಯುವ ವೇಳೆ ಬೆಸ್ಕಾಂ ಅಧಿಕಾರಿಗಳಿಬ್ಬರು ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರು ನಗರದ ಹುಳಿಮಾವಿನಲ್ಲಿ ನಡೆದಿದೆ.

ಹುಳಿಮಾವು ಬೆಸ್ಕಾಂ ವಿಭಾಗದ ಎಇಇ ನಾಗರತ್ನ, ಜೆಇ ಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು.

ಹೊಸದಾಗಿ ನಿರ್ಮಿಸಲಾದ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕೊಡಲು ಗುತ್ತಿಗೆದಾರ ಅರ್ಷದ್ ಉಲ್ಲಾ ಅವರಿಂದ 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅರ್ಷದ್‌ ಉಲ್ಲಾ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು, ಲಂಚ ಪಡೆಯುವಾಗಲೇ ಲಾಕ್‌ ಮಾಡಿದ್ದಾರೆ.

ಸದ್ಯ ಬೆಸ್ಕಾಂ ಅಧಿಕಾರಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!