Tuesday, August 18, 2026
spot_imgspot_img
spot_imgspot_img

ಸಾಲೆತ್ತೂರು ವಲಯ ಬಂಟರ ಸಂಘ ವತಿಯಿಂದ ಬಂಟರ ಕ್ರೀಡೋತ್ಸವ, ಪ್ರತಿಭಾ ಪುರಸ್ಕಾರ

- Advertisement -
- Advertisement -

ಹಿರಿಯ ಕಂಬಳ ಓಟಗಾರ ಚಂದ್ರಹಾಸ ರೈ ಬದಿಯಡ್ಕ ರವರಿಗೆ ಸನ್ಮಾನ

ಸಾಲೆತ್ತೂರು: ಬಂಟರ ಸಂಘ ಸಾಲೆತ್ತೂರು ವಲಯದ ವತಿಯಿಂದ ಬಂಟರ ಕ್ರೀಡೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.16ರಂದು ಶ್ರೀ ಮಲರಾಯಿ ಮೂವರ್ ದೈವಂಗಳ ದೈವಸ್ಥಾನ ಕಾಪುಮಜಲು ಗದ್ದೆಯಲ್ಲಿ ನಡೆಯಿತು.

ಬೆಳಗ್ಗೆ 9 ಗಂಟೆಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಸಾಲೆತ್ತೂರು ವಲಯದ ಅಧ್ಯಕ್ಷ ಉದಯ್ ಕುಮಾರ್ ರೈ ಅಗರಿ ವಹಿಸಿದ್ದರು. ಸುಬ್ಬಣ್ಣ ನಾಯಕ್ ಅಗರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಠಲ್ ಶೆಟ್ಟಿ ಕುಲ್ಯಾರ್, ದೇವಿದಾಸ್ ಶೆಟ್ಟಿ ಪಾಲ್ತಾಜೆ, ವಿಠಲ್ ಶೆಟ್ಟಿ ಕಾಪುಕೋಡಿ ಹಾಗೂ ಶ್ರೀಮತಿ ಸರೋಜ ಎಸ್. ಶೆಟ್ಟಿ ಕೊಲ್ಲಾಡಿ, ಶ್ರೀಮತಿ ಸುಖಾಮತಿ ಶೆಟ್ಟಿ ಕೊಡಂಗಾಯಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ದೇವಪ್ಪ ಶೇಖ ಪೀಲ್ಯಡ್ಕ ಸ್ವಾಗತಿಸಿದರು. ಮೌಲ್ಯ ಪಿ ರೈ ಪ್ರಾರ್ಥಿಸಿದರು.

ಬೆಳಗ್ಗೆ 11 ಗಂಟೆಗೆ ನಡೆದ ಮತ್ತೊಂದು ಸಭಾ ಕಾರ್ಯಕ್ರಮವನ್ನು ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಉದಯ್ ಕುಮಾರ್ ರೈ ಅಗರಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ದಿವ್ಯ ವಸಂತ ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ, ಸೇಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿ, ಮಂಗಳೂರು, ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುಜಂಗ ರೈ ಪಡಾರುಗುತ್ತು, ಬಂಟರ ಸಂಘ ಬಂಟ್ವಾಳ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ರೈ ಕಲ್ಲಡ್ಕ, ಯಕ್ಷಧ್ರುವ ಪಟ್ಲ ಫೌಂಡೇಶನ್ ವಿಟ್ಲ ಘಟಕದ ಅಧ್ಯಕ್ಷ ಡಾ. ಪೂವಪ್ಪ ಶೆಟ್ಟಿ ಅಳಿಕೆ, ವಿಟ್ಲ ಪಡ್ನೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಿಇಒ ಲಕ್ಷ್ಮೀಶ ರೈ ಎರ್ಮೆನಿಲೆ, ಉದ್ಯಮಿ ರಮೇಶ್ ಶೆಟ್ಟಿ ಕುಡ್ತಮುಗೇರು, ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿದ್ಯಾಧರ ರೈ ಚೆಂಬರಡ್ಕ ಹಾಗೂ ರಾಮಕೃಷ್ಣ ಸೊಸೈಟಿ ವಿಟ್ಲ ಶಾಖೆಯ ಮ್ಯಾನೇಜರ್ ಗೋಪಾಲಕೃಷ್ಣ ಶೆಟ್ಟಿ ಪುದ್ದೋಟು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುದೇಶ್ ಭಂಡಾರಿ ಏರ್ಮನಿಲೆ ಸ್ವಾಗತಿಸಿದರು. ಹರ್ಷಿತಾ ಎಸ್ ರೈ, ವರ್ಷಿತಾ ಎಸ್ ರೈ, ನಿಖಿತಾ ರೈ ಕುದ್ರಿಯ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಹರಿಶ್ಚಂದ್ರ ಆಳ್ವ ಪರಂಗಿಪೇಟೆ, ಗಂಗಾಧರ ಆಳ್ವ ಅನಂತಾಡಿ, ಅರವಿಂದ ರೈ ಮೂರ್ಜೆಬೆಟ್ಟು ಪ್ರಧಾನ ಕಾರ್ಯದರ್ಶಿ, ಬಾಲಕೃಷ್ಣ ರೈ ಕೊಲ್ಲಾಡಿ ಗೌರವಾಧ್ಯಕ್ಷ, ಪವಿತ್ರ ಪೂಂಜ ಕೊಡಂಗೆ ಕೋಶಾಧಿಕಾರಿ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಗಾಯತ್ರಿ ಎಸ್. ರೈ ಕೊಲ್ಲಾಡಿ, ಅಧ್ಯಕ್ಷೆ ಸುನೀತಾ ಯು. ರೈ ಗೌರಿಕೋಡಿ, ಕಾರ್ಯದರ್ಶಿ ವಿನುತಾ ಎ. ಶೆಟ್ಟಿ ಕೊಲ್ಲಾಡಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ವಿಜಯ ಕಾರ್ಯಕ್ರಮ ನಿರೂಪಿಸಿದರು

ಇದೇ ವೇಳೆ ಹಿರಿಯ ಕಂಬಳ ಓಟಗಾರ ಚಂದ್ರಹಾಸ ರೈ ಬದಿಯಡ್ಕ ಹಾಗೂ ಬಂಟ್ವಾಳ ಬಂಟರ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ರೈ ಅವರನ್ನು ಸನ್ಮಾನಿಸಲಾಯಿತು. ಇದರ ಜತೆಗೆ ಭುಜಂಗ ರೈ ಪಡಾರುಗುತ್ತು, ದಂಪತಿಗಳಿಗೆ 50 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಗೌರವಾರ್ಪಣೆ ಮಾಡಲಾಯಿತು.

ಸಾಲೆತ್ತೂರು, ಕೊಲ್ನಾಡು ಹಾಗೂ ವಿಟ್ಲ ಪಡ್ನೂರು ಗ್ರಾಮಗಳ ವ್ಯಾಪ್ತಿಯ ಬಂಟರ ಸಂಘದ ಆಶ್ರಯದಲ್ಲಿ ನಡೆದ ಕ್ರೀಡೋತ್ಸವದಲ್ಲಿ ವಿವಿಧ ವಯೋಮಾನದವರಿಗೆ ಓಟ, ಶಾಟ್‌ಪುಟ್, ರಿಲೇ ಸೇರಿದಂತೆ ಹಲವು ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳು ನಡೆದವು.

ಪುರುಷರಿಗಾಗಿ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಹಾಗೂ ಮಹಿಳೆಯರಿಗಾಗಿ ಕಬಡ್ಡಿ, ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ಆಯೋಜಿಸಲಾಗಿತ್ತು. ದಂಪತಿಗಳಿಗಾಗಿ ಹಾಳೆ ಓಟ, ಬಲೂನ್ ಸ್ಪರ್ಧೆ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆದವು.

ಇದರ ಜೊತೆಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ್ರೀಡಾಕೂಟದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದು, ಇಡೀ ಕಾರ್ಯಕ್ರಮ ಸಂಭ್ರಮದ ವಾತಾವರಣಕ್ಕೆ ಸಾಕ್ಷಿಯಾಯಿತು.

- Advertisement -

Related news

error: Content is protected !!