Thursday, August 20, 2026
spot_imgspot_img
spot_imgspot_img

ವಿಟ್ಲ:ದ.ಕ ಮತ್ತು ಉಡುಪಿ ಜಿಲ್ಲಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ SKPA ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ

- Advertisement -
- Advertisement -

ವಿಟ್ಲದ ಫೋಟೋ ಮೆಟಿಕ್ ಸ್ಟುಡಿಯೋ ಮಾಲಕ ಶ್ರೀ ಕೃಷ್ಣ ಭಟ್ ಅವರಿಗೆ ಸನ್ಮಾನ

ವಿಟ್ಲ: ದ ಕ ಮತ್ತು ಉಡುಪಿ ಜಿಲ್ಲಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ SKPA ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ವಿಟ್ಲದ ಪ್ರವಾಸಿ ಮಂದಿರದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಟ್ಲದ ಫೋಟೋ ಮೆಟಿಕ್ ಸ್ಟುಡಿಯೋ ಮಾಲಕ ಶ್ರೀ ಕೃಷ್ಣ ಭಟ್ ಇವರನ್ನು ಸನ್ಮಾನಿಸಲಾಯಿತು.

SKPA ಜಿಲ್ಲಾ ಕಟ್ಟದ ಸಮಿತಿಯ ಅಧ್ಯಕ್ಷ ಆನಂದ ಎನ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಬಂಟ್ವಾಳ ವಲಯದ ಅಧ್ಯಕ್ಷ ಕೆ ರಾಜೇಂದ್ರ, ಕಾರ್ಯದರ್ಶಿ ರವಿಪ್ರಕಾಶ್ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾಜ್ ರಾವ್, ಗೌರವ ಅಧ್ಯಕ್ಷ ಕಿಶೋರ್, ಮಾಜಿ ಅಧ್ಯಕ್ಷರುಗಳಾದ ಕುಮಾರಸ್ವಾಮಿ, ಹರೀಶ್, ಇತರ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲಾ ಮಾಜಿ ಕಾರ್ಯದರ್ಶಿ ದಯಾನಂದ ಬಂಟ್ವಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ರವಿ ಕಲ್ಪನೆ ವಂದಿಸಿದರು.

- Advertisement -

Related news

error: Content is protected !!