Sunday, August 23, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ವಾರ್ಷಿಕ ಮಹಾಸಭೆ

- Advertisement -
- Advertisement -

ವಿಟ್ಲ ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘಕ್ಕೆ "ಸಾಧನಾ ಪ್ರಶಸ್ತಿ"

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಶನಿವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ ಲಭಿಸಿದ್ದು, ಸಂಘಕ್ಕೆ ಪ್ರಥಮ ಬಾರಿಗೆ ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಧನಾ ಪುರಸ್ಕಾರ ಲಭಿಸಿದೆ.

2025-26ನೇ ಆರ್ಥಿಕ ಸಾಲಿನಲ್ಲಿ ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘವು ರೂ. 294.84 ಕೋಟಿ ವ್ಯವಹಾರ, ರೂ.24. 37 ಕೋಟಿ ಠೇವಣಿ, ರೂ. 21.94 ಕೋಟಿ ಸಾಲ ಹಾಗೂ ರೂ. 48.51 ಲಕ್ಷ ಲಾಭ ಗಳಿಸಿ, ಅಭೂತಪೂರ್ವ ಸಾಧನೆ ಮಾಡಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ|ಎಂ.ಎನ್ ರಾಜೇಂದ್ರ ಕುಮಾರ್ ಅವರು ಬ್ರಹ್ಮಶ್ರೀ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ಎನ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್ ಎನ್ ರಮೇಶ್, ಸಂಘದ ನಿರ್ದೇಶಕರಾದ ಸಂಜೀವ ಪೂಜಾರಿ ಎಂ ಎಸ್, ಪ್ರಕಾಶ್ .ಕೆ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!