Sunday, August 23, 2026
spot_imgspot_img
spot_imgspot_img

ಇಂದು ಸಂಜೆ ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ -2026 ಗ್ರ್ಯಾಂಡ್ ಫಿನಾಲೆ

- Advertisement -
- Advertisement -

ಮಂಗಳೂರಿನ ಪ್ರತಿಭೆ ಅಶ್ಮಿತ್ ಎ ಜೆ ಯವರ ಫಿನಾಲೆ ಪರ್ಫಾರ್ಮೆನ್ಸ್ ವೀಕ್ಷಿಸಿ ಇದು ರಾತ್ರಿ 7 ಗಂಟೆಗೆ ಝೀ ಕನ್ನಡ ಚಾನೆಲ್ ನಲ್ಲಿ

ವಿಜಯದ ಪಟ್ಟ ಯಾರ ಮುಡಿಗೇರುತ್ತೆ…?

ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲ್ ರೇವತಿ ಜಯರಾಮ್ ದಂಪತಿಗಳ ಸುಪುತ್ರ ಅಶ್ಮಿತ್ ಎ ಜೆ ಯವರು ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಲಿಟಲ್ ಚಾಂಪ್ಸ್ -2026 ಶೋ ದಲ್ಲಿ ಫೈನಲ್ ಹಂತಕ್ಕೆ ತಲುಪಿದ್ದು, ಇಂದು ಸಂಜೆ 7 ಗಂಟೆ ಗೆ ಝೀ ಕನ್ನಡ ಚಾನೆಲ್ ನಲ್ಲಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಅತೀ ಕಿರಿ ವಯಸ್ಸಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಗೈದು ಇದೀಗ ಸರಿಗಮಪ ಲಿಟಲ್ ಚಾಂಪ್ಸ್ -2026 ರ ರಲ್ಲಿ ಪ್ರತೀ ವಾರ ಉತ್ತಮ ಹಾಡುಗಳನ್ನು ಹಾಡಿ ಜೊತೆಗೆ ವಯಲಿನ್ ನುಡಿಸಿ ಜಡ್ಜಸ್ ಗಳಾದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣ ಹಾಗೂ ಮ್ಯಾಜಿಕಲ್ ಮ್ಯೂಸಿಕ್ ಕಾಂಪೋಸರ್ ಅರ್ಜುನ್ ಜನ್ಯ ಇವರಿಂದ ಮೆಚ್ಚುಗೆ ಪಡೆದು “ಸ್ವರ ಪುತ್ರ” ಎಂಬ ಬಿರುದನ್ನು ಕರ್ನಾಟಕದ ಜನರ ಮನೆ- ಮನೆಗಳಲ್ಲಿ ಪ್ರಸಿದ್ದಿ ಪಡೆದಿದ್ದಾರೆ.

ಫೈನಲ್ ನಲ್ಲಿ ವಿಜಯದ ಪಟ್ಟ ಯಾರ ಮೂಡಿಗೇರುತ್ತೆ ಎಂಬುದು ಕಾದು ನೋಡಬೇಕಾಗಿದೆ. ಅದಕ್ಕಾಗಿ ಎಲ್ಲರೂ ವೀಕ್ಷಿಸಿ ಇಂದು ರಾತ್ರಿ 7 ಗಂಟೆ ಗೆ ನಿಮ್ಮ ಝೀ ಕನ್ನಡ ದಲ್ಲಿ…

- Advertisement -

Related news

error: Content is protected !!