- Advertisement -
- Advertisement -




ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಅಶ್ಮಿತ್ ಎ ಜೆ ರವರಿಗೆ ಹುಟ್ಟೂರಿನ ಗೌರವ ಸಮಾರಂಭ – ರೋಡ್ ಶೋ ಕಾರ್ಯಕ್ರಮ ನಡೆಯಿತು.
ವಿಟ್ಲ ನಿರೀಕ್ಷಣಾ ಕಚೇರಿಯಿಂದ ಹೊರಟ ವಿಜಯೋತ್ಸವ ಮೆರವಣಿಗೆ ಜೈನ ಬಸದಿಯ ವರೆಗೆ ಸಾಗಿ ಬಂದು ಅಲ್ಲಿಂದ ಹಿಂತಿರುಗಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವರೆಗೆ ವಿಟ್ಲ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿ ಬರಲಾಯಿತು.

ಈ ಸಂದರ್ಭದಲ್ಲಿ ವಿಟ್ಲದ ಹೃದಯ ಭಾಗದಲ್ಲಿರುವ ಸಪ್ತ ಜ್ಯುವೆಲ್ಸ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು, ಹಾರ ಫಲ ಪುಷ್ಪ ಹಾಗೂ ಚಿನ್ನದ ದೇವರ ವಿಗ್ರಹವನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಪ್ತ ಜ್ಯುವೆಲ್ಸ್ ನ ಪಾಲುದಾರರಾದ ಶ್ಯಾಮ್ ಭಟ್, ಸುದರ್ಶನ್ ಕುಮಾರ್, ದೇವಿ ಪ್ರಸಾದ್, ಕೃಷ್ಣ ಪ್ರಸಾದ್, ಶಿವ ಪ್ರಕಾಶ್, ಸುಕುಮಾರ್, ಗೋವಿಂದರಾಜ, ನಿಶಾ ಸರಲಾಯ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -








