Thursday, August 27, 2026
spot_imgspot_img
spot_imgspot_img

ಮಂಗಳೂರಿನ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಮಂಜೂರು

- Advertisement -
- Advertisement -

ಮಂಗಳೂರು: ಕೇಂದ್ರ ಸರ್ಕಾರದ ಪಿಎಂ ಬಸ್ ಸೇವಾ ಯೋಜನೆಯಡಿ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 100 ಹೊಸ ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿವೆ. ಈ ಬಸ್‌ಗಳ ಸೇವೆಯನ್ನು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಷ್ಟೇ ಅಲ್ಲದೆ ಉಡುಪಿ, ಮೂಡುಬಿದಿರೆ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಈ ಯೋಜನೆಯಡಿ ಸ್ಟೇಟ್‌ ಬ್ಯಾಂಕ್‌ನಿಂದ ಸುರತ್ಕಲ್, ಮೂಲ್ಕಿ ಮತ್ತು ಪಡುಬಿದ್ರಿ ಮಾರ್ಗವಾಗಿ ಉಡುಪಿಗೆ 10 ಬಸ್‌ಗಳು ಹಾಗೂ ವಾಮಂಜೂರು, ಗುರುಪುರ, ಕೈಕಂಬ ಮಾರ್ಗವಾಗಿ ಮೂಡುಬಿದಿರೆಗೆ 10 ಬಸ್‌ಗಳು ಸಂಚರಿಸಲಿವೆ.

ಸಾರ್ವಜನಿಕರ ಅನುಕೂಲಕ್ಕಾಗಿ ಪಡೀಲ್‌ನಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ 4 ಬಸ್‌ಗಳು ಮತ್ತು ಹಿಂದೆ ಸ್ಥಗಿತಗೊಂಡಿದ್ದ ವಿಮಾನ ನಿಲ್ದಾಣದ ರೂಟ್‌ಗೆ ಮತ್ತೆ 2 ಬಸ್‌ಗಳನ್ನು ನಿಯೋಜಿಸಲಾಗುತ್ತಿದೆ.

ಈ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆಗಾಗಿ ಮಂಗಳೂರಿನ ಕುಂಟಿಕಾನ ಮತ್ತು ಬಾಳೆಪುಣಿಯಲ್ಲಿ ಡಿಪೋಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಡಿಪೋದಲ್ಲಿ 50 ಬಸ್‌ಗಳ ನಿಲುಗಡೆ ಹಾಗೂ ಚಾರ್ಜಿಂಗ್ ಸ್ಟೇಷನ್‌ ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡ‌ರ್ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!