Saturday, August 29, 2026
spot_imgspot_img
spot_imgspot_img

ಕಡಬ: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ – ಓರ್ವ ಆರೋಪಿ ಹಾಗೂ 3 ವಾಹನಗಳು ವಶಕ್ಕೆ

- Advertisement -
- Advertisement -

ಕಡಬ: ಹಳೆನೆರೆಂಕಿ ಗ್ರಾಮದ ಕುನ್ನಿಕು ಎಂಬಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಇಸ್ಪೀಟ್ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಠಾಣೆಯ ಪಿಎಸ್ಐ ಜಂಬುರಾಜ್ ಮಹಾಜನ್ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.

ಆ.28 ರಂದು ಸಂಜೆ ಮೋಹನದಾಸ್ ರೈ ಎಂಬವರ ಜಾಗದಲ್ಲಿ ಅಕ್ರಮ ಇಸ್ಪೀಟ್ ನಡೆಯುತ್ತಿರುವುದು ಕಂಡುಬಂದಿದ್ದು, ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ವೇಳೆ ಕಡಬ ಕುದ್ಮಾರು ನಿವಾಸಿ ಗುರುವ (44) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಇಸ್ಪೀಟ್ ಆಟಕ್ಕೆ ಬಳಸುತ್ತಿದ್ದ ಕಾರ್ಡ್‌ಗಳು, ನಗದು ರೂ. 1,700, ಆರೋಪಿಗಳು ಬಿಟ್ಟು ಹೋಗಿದ್ದ 2 ದ್ವಿಚಕ್ರ ವಾಹನ ಹಾಗೂ 1 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 102/2026, ಕಲಂ 78, 80 KP Act ಮತ್ತು 112 BNS-2023 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!