Sunday, August 30, 2026
spot_imgspot_img
spot_imgspot_img

ಪುತ್ತೂರು: (ಆ. 31) ಹಿಂದೂ ಸಂಘಟನೆಗಳ ಬೃಹತ್ ಜನಜಾಗೃತಿ ಆಂದೋಲನ-ಪುತ್ತೂರು ಚಲೋ-ದರ್ಬೆ ವೃತ್ತದಿಂದ- ಶ್ರೀ ವೆಂಕಟರಮಣ ದೇವಸ್ಥಾನದವರೆಗೆ*

- Advertisement -
- Advertisement -

ಪುತ್ತೂರು: ಜೆರಾಕ್ಸ್ ಅಂಗಡಿಯಲ್ಲಿ ಹಿಂದೂಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಸಮಾಜಕ್ಕೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ – ಭಜರಂಗದಳ ಪುತ್ತೂರು – ದ ಕ ಜಿಲ್ಲೆ ನೇತೃತ್ವದಲ್ಲಿ ಹಿಂದೂ ಸಂಘಟನೆಗಳ ಬೃಹತ್ ಜನಜಾಗೃತಿ ಆಂದೋಲನ “ಪುತ್ತೂರು ಚಲೋ” ಆಗಸ್ಟ್ 31 ನೇ ಸೋಮವಾರ ನಡೆಯಲಿದೆ.

ಬೆಳಗ್ಗೆ 9.30 ಗಂಟೆಗೆ ದರ್ಬೆ ವೃತ್ತದಿಂದ ಮೆರವಣಿಗೆ ಆರಂಭಗೊಂಡು ಪುತ್ತೂರಿನ ಪ್ರಮುಖ ರಸ್ತಯಲ್ಲಿ ಸಾಗಿ ಬಳಿಕ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬಂದು ಬಳಿಕ ಅಲ್ಲೇ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವು ಹಿಂದೂ ಮುಖಂಡರು ಭಾಗವಹಿಸಲಿದ್ದಾರೆ. ಎಲ್ಲಾ ಹಿಂದೂ ಕಾರ್ಯಕರ್ತರು, ವರ್ತಕರು ಮತ್ತು ಪುತ್ತೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರು ಬಿಜೆಪಿ ಮತ್ತು ಪರಿವಾರ ಸಂಘಟನೆಗಳ ಬೆಂಬಲ

ಪುತ್ತೂರು ಚಲೋ ಕಾರ್ಯಕ್ರಮಕ್ಕೆ ಪುತ್ತೂರು ಭಾರತೀಯ ಜನತಾ ಪಾರ್ಟಿ ಮತ್ತು ಪರಿವಾರ ಸಂಘಟನೆಗಳು ಬೆಂಬಲ ನೀಡಿದೆ.

- Advertisement -

Related news

error: Content is protected !!