Monday, August 31, 2026
spot_imgspot_img
spot_imgspot_img

31 ವರ್ಷಗಳ ಸುದೀರ್ಘ ಸೇವೆ ಬಳಿಕ ಬಾಳಿಲ ಅಂಗನವಾಡಿ ಸಹಾಯಕಿ ವನಿತಾ ರೈ ನಿವೃತ್ತಿ

- Advertisement -
- Advertisement -

ಮಂಗಳೂರು: ಸುಮಾರು 31 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅಂಗನವಾಡಿ ಸಹಾಯಕಿ ಶ್ರೀಮತಿ ವನಿತಾ ರೈ ಅವರು ಸೇವೆಯಿಂದ ಗೌರವಪೂರ್ವಕವಾಗಿ ನಿವೃತ್ತರಾಗಿದ್ದಾರೆ.

ಬಾಳಿಲ, ಸುಳ್ಯ ನಿವಾಸಿ ದಿವಂಗತ ಶೀನಪ್ಪ ರೈ ಅವರ ಪತ್ನಿ ಶ್ರೀಮತಿ ವನಿತಾ ರೈ ಅವರು ತಮ್ಮ ಸೇವಾ ಜೀವನದಲ್ಲಿ ಸುಮಾರು 26 ವರ್ಷಗಳ ಕಾಲ ಬಾಳಿಲ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದರು.

ಬಳಿಕ ವರ್ಗಾವಣೆಯಾಗಿ ಮಂಗಳೂರು ಅಡ್ಯಾರ್ ಪದವು ಸಂತ ಲಿಗೋರಿಸ್ ಅಂಗನವಾಡಿ ಕೇಂದ್ರಕ್ಕೆ ನಿಯೋಜನೆಗೊಂಡ ಅವರು, ಕಳೆದ 5 ವರ್ಷಗಳಿಂದ ಅಲ್ಲಿಯೂ ಸೇವೆ ಸಲ್ಲಿಸಿದ್ದರು.

ಮಕ್ಕಳ ಆರೈಕೆ, ಪೋಷಣಾ ಕಾರ್ಯಕ್ರಮಗಳು ಹಾಗೂ ಅಂಗನವಾಡಿ ಕೇಂದ್ರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮಕ್ಕಳ ಹಾಗೂ ಪೋಷಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದ್ದರು.

ಒಟ್ಟು 31 ವರ್ಷಗಳ ನಿಸ್ವಾರ್ಥ ಹಾಗೂ ಶ್ಲಾಘನೀಯ ಸೇವೆಯನ್ನು ಪೂರ್ಣಗೊಳಿಸಿದ ಶ್ರೀಮತಿ ವನಿತಾ ರೈ ಅವರು ಇದೀಗ ಸಂತ ಲಿಗೋರಿಸ್ ಅಂಗನವಾಡಿ ಕೇಂದ್ರ, ಅಡ್ಯಾರ್ ಪದವು, ಮಂಗಳೂರು ಇಲ್ಲಿಂದ ನಿವೃತ್ತರಾಗಿದ್ದಾರೆ.

ಅವರ ನಿವೃತ್ತಿ ಜೀವನವು ಸುಖ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಹಿತೈಷಿಗಳು ಶುಭ ಹಾರೈಸಿದ್ದಾರೆ.

- Advertisement -

Related news

error: Content is protected !!