- Advertisement -
- Advertisement -





ರಾಮನಗರ: ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಮಗಳು, ಅಳಿಯನ ಎದುರಲ್ಲೇ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶಿವಲಿಂಗಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಮಗಳು ಹಾಗೂ ಅಳಿಯನೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದ್ದು, ಪ್ರಾಣಬಿಟ್ಟಿದ್ದಾರೆ.
ಸೋಫಾದ ಮೇಲೆ ಕುಳಿತು ಊಟ ಮಾಡುವಾಗ ಕುಸಿದು ಬೀಳುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಕುಳಿತ ಜಾಗದಲ್ಲೇ ಕುಸಿದ ತಂದೆಯನ್ನ ಮೊದಲಿಗೆ ಅಲ್ಲೇ ಊಟ ಮಾಡುತ್ತಿದ್ದ ಅವರ ಮಗಳು ನೋಡಿದ್ದಾರೆ.
ಆಘಾತದಲ್ಲಿ ಕಿಟಾರನೆ ಚೀರುತ್ತಾ ತಂದೆ ಬಳಿ ಓಡಿಬಂದಿದ್ದಾರೆ. ತಕ್ಷಣ ಕುಸಿದು ಬಿದ್ದ ತಂದೆಯ ಎದೆ ಒತ್ತಿ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತಂದೆ ಪ್ರಾಣಬಿಟ್ಟಿದ್ದಾರೆ.
- Advertisement -








