Saturday, September 19, 2026
spot_imgspot_img
spot_imgspot_img

ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಬಾಲಕರ ಫುಟ್ಬಾಲ್ ಪಂದ್ಯಾಟ: ತುಂಬೆ ಬಿಎ ಕಾಲೇಜು ಪ್ರಥಮ

- Advertisement -
- Advertisement -

ಕನ್ಯಾನ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಸರಕಾರಿ ಪದವಿಪೂರ್ವ ಕಾಲೇಜು (ಕೆಪಿಎಸ್) ಕನ್ಯಾನ ಇವರ ಸಹಯೋಗದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಬಾಲಕರ ಫುಟ್ಬಾಲ್ ಪಂದ್ಯಾಟದಲ್ಲಿ ತುಂಬೆ ಬಿಎ ಕಾಲೇಜು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.ಸೆ. 17ರಂದು ಕನ್ಯಾನದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಂದ್ಯಾಟ ನಡೆಯಿತು.

ಭಾರತ ಸೇವಾಶ್ರಮದ ಈಶ್ವರ ಭಟ್ ಅವರು ದೀಪ ಬೆಳಗಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಕೆಪಿಎಸ್ ಸಮಿತಿಯ ಉಪಾಧ್ಯಕ್ಷ ಕೆ.ಪಿ. ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ರೈ ಡಿ. ಅತಿಥಿಗಳನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಕ್ರೀಡಾ ಸಂಚಾಲಕಿ ಮಿರ್ಲಂ ಬೇಗಂ ಧನ್ಯವಾದ ಸಲ್ಲಿಸಿದರು.ಅಂತಿಮ ಪಂದ್ಯದಲ್ಲಿ ತುಂಬೆ ಬಿಎ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡರೆ, ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು, ಅಳಿಕೆ ದ್ವಿತೀಯ ಸ್ಥಾನ ಗಳಿಸಿತು. ಬಂಟ್ವಾಳ ತಾಲೂಕು ಕ್ರೀಡಾ ಸಂಯೋಜಕ ನಿತಿನ್ ಕೋಡಿಯ ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.

- Advertisement -

Related news

error: Content is protected !!