

ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್‌ನ ರಾಮ ಲಕ್ಷ್ಮಿ ಹಾಲ್‌ನಲ್ಲಿ ಪದಾಧಿಕಾರಿಗಳ ಸಮಾರಂಭಕ್ಕೆ ವಿದ್ಯಾರ್ಥಿಗಳು ಜಮಾಯಿಸಿದ್ದ ವೇಳೆ ದುರ್ಬಲ ಗೋಡೆ ಕುಸಿದು ಐವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅತಿಯಾದ ಜನಸಂದಣಿಯಿಂದಾಗಿ ಹಾಲ್‌ನ ಹೊರಭಾಗದ ಕಾರಿಡಾರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಆಧಾರ ಗೋಡೆಗೆ ಒರಗಿಕೊಂಡಿದ್ದರು.

ಈ ವೇಳೆ ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಹಮ್ಮದ್ ಶಮಾಜ್ (16) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಬ್ರೇನ್ ಡೆಡ್ ಸ್ಥಿತಿಯಲ್ಲಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ವೈದ್ಯಕೀಯವಾಗಿ ಮೃತಪಟ್ಟಿರುವುದಾಗಿ ಇನ್ನೂ ಘೋಷಿಸಲಾಗಿಲ್ಲ.
ಮಹಮ್ಮದ್ ಶನಾನ್ ಅಹಮ್ಮದ್ (18)ಸೂರಿಂಜೆ,ಹನೀಫ್ (23)ಅಡ್ಯಾರ್, ದವೂದ್ ಫರ್ಸಿನ್ ಅಹಮ್ಮದ್ (18)ಗಾಂಧಿನಗರ, ಕಾವೂರುಮಹಮ್ಮದ್ ಶಾಕೀಲ್ ಹುಸೈನ್ (18)ಕಸಬ ಬೆಂಗ್ರೆ ಇವರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳು ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.








