Monday, September 28, 2026
spot_imgspot_img
spot_imgspot_img

ಬ್ಯಾಂಕ್‌ಗಳ ಮಹತ್ವದ ಬೇಡಿಕೆ ಕುರಿತು ಚರ್ಚೆಗೆ ಒಪ್ಪಿಗೆ- ಸೆ.28ರಿಂದ ನಡೆಯಬೇಕಿದ್ದ ಮುಷ್ಕರ ರದ್ದು

- Advertisement -
- Advertisement -

ನವದೆಹಲಿ: ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಸೇರಿದಂತೆ ಬ್ಯಾಂಕ್‌ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಚರ್ಚೆ ನಡೆಸಲು ಒಪ್ಪಿಗೆ ದೊರೆತ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 28ರಿಂದ 30ರವರೆಗೆ ನಡೆಸಲು ಉದ್ದೇಶಿಸಿದ್ದ ದೇಶವ್ಯಾಪಿ ಬ್ಯಾಂಕ್‌ ಮುಷ್ಕರವನ್ನು ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್ಸ್‌ (UFBU) ರದ್ದುಗೊಳಿಸಿದೆ.

ಹೀಗಾಗಿ ದೇಶಾದ್ಯಂತ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ (IBA) ಮತ್ತು UFBU ನಡುವೆ ನಡೆದ ಚರ್ಚೆಯಲ್ಲಿ ಬ್ಯಾಂಕ್‌ ನೌಕರರ ಬೇಡಿಕೆಗಳ ಕುರಿತು ಮುಂದಿನ ಹಂತದಲ್ಲಿ ಚರ್ಚೆ ನಡೆಸಲು ಒಪ್ಪಿಗೆ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಸತತವಾಗಿ ಬ್ಯಾಂಕಿಂಗ್‌ ಸೇವೆ ಸ್ಥಗಿತಗೊಳ್ಳದಂತೆ ಮುಷ್ಕರ ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ.

ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್‌ ಕೆಲಸದ ಅವಧಿ, ಪಿಂಚಣಿ ಪರಿಷ್ಕರಣೆ, ಎಲ್ಲ ಪಿಂಚಣಿದಾರರಿಗೆ ಸಮಾನ ತುಟ್ಟಿಭತ್ಯೆ ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಬದಲಿಗೆ ಹಳೆಯ ಪಿಂಚಣಿ ಯೋಜನೆ (OPS) ಆಯ್ಕೆ ಮಾಡಲು ಅವಕಾಶ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್‌ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿದ್ದವು.ಮುಷ್ಕರ ರದ್ದಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 28ರಿಂದ ಬ್ಯಾಂಕ್‌ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಸಾಮಾನ್ಯ ಬ್ಯಾಂಕಿಂಗ್‌ ಸೇವೆಗಳು ಲಭ್ಯವಾಗಲಿವೆ.

- Advertisement -

Related news

error: Content is protected !!