Tuesday, September 29, 2026
spot_imgspot_img
spot_imgspot_img

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ಶಾಂತಿನಗರ ವಾರ್ಷಿಕ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ) ಶಾಂತಿನಗರ ಇದರ ವಾರ್ಷಿಕ ಮಹಾಸಭೆಯು ಸಿ. ಕುಶಾಲಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಸೆ. 27 ಆದಿತ್ಯವಾರದಂದು ವಿಟ್ಲದ ಶಾಂತಿನಗರದಲ್ಲಿರುವ ಅಕ್ಷಯ ಸಮುದಾಯ ಭವನದಲ್ಲಿ ಜರುಗಿತು.

ಸಭೆಯಲ್ಲಿ ಯುವ ವೇದಿಕೆ ಕಾರ್ಯದರ್ಶಿ ವೇಣು ಗೋಪಾಲ್ ಅವರು ಸಂಘದ ಲೆಕ್ಕಪತ್ರ ಮಂಡಿಸಿದರು, ಮಹಿಳಾ ಘಟಕದ ಕಾರ್ಯದರ್ಶಿ ಹೇಮಲತಾ ಹಡೀಲು ಹಾಗೂ ಸಂಘದ ಕಾರ್ಯದರ್ಶಿ ವಿಶ್ವನಾಥ ಗೌಡ ಕುಳಾಲು ಅವರು ವರದಿ ವಾಚಿಸಿದರು.

ಸಭೆಯಲ್ಲಿ ಸಂಘದ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ಸಿ. ಕುಶಾಲಪ್ಪ ಗೌಡ , ಗೌರವಾಧ್ಯಕ್ಷರಾಗಿ ಶ್ರೀಮತಿ ಧರ್ಮಾವತಿ, ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ ಕುಳಾಲು,ಮತ್ತು ಪದ್ಮನಾಭ ಗೌಡ ಬಿ.ಸಿ ರೋಡ್, ಕಾರ್ಯದರ್ಶಿಯಾಗಿ ಈಶ್ವರ ಗೌಡ ಅಳಿಕೆ,ಕೋಶಾಧಿಕಾರಿಯಾಗಿ ರಾಧಾಕೃಷ್ಣ ಕೂಡೂರು,ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ಪೊನ್ನತ್ತಡಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಮ ಗೌಡ ಮಲಾರು, ಪ್ರಧಾನ ಸಲಹೆಗಾರರಾಗಿ ಲಿಂಗಪ್ಪ ಗೌಡ ಅಳಿಕೆ, ತನಿಯಪ್ಪ ಗೌಡ ದಾಸಕೋಡಿ,ಮೋಹನ್ ಕಾಯರ್ ಮಾರ್, ಮೋನಪ್ಪ ಗೌಡ ಶಿವಾಜಿನಗರ, ಚಂದ್ರಶೇಖರ ಗಿರಿನಿವಾಸ ಹಾಗೂ 30 ಜನರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಮಹಿಳಾ ಘಟಕದ ಅದ್ಯಕ್ಷೆ ಅಮಿತಾ ಗೊಪಾಲ ಕೃಷ್ಣ ಪುನರಾಯ್ಕೆ ಯಾಗಿದ್ದಾರೆ.ಕಾರ್ಯದರ್ಶಿಯಾಗಿ ಹೇಮಲತಾ ಹಡೀಲು ಆಯ್ಕೆಯಾಗಿದ್ದಾರೆ

ಯುವವೇದಿಕೆ ಅಧ್ಯಕ್ಷರಾಗಿ ಚಿದಾನಂದ ಪೆಲತ್ತಿಂಜ, ಸುಧೀರ್‍ ವಿದ್ಯಾನಗರ ಕಾರ್ಯದರ್ಶಿ, ಗೌರವಧ್ಯಕ್ಷರು ದಿನೇಶ್ ಮಾಡ್ತೆಲು ಆಯ್ಕೆ.

ಸಭೆಯಲ್ಲಿ ಹರಿಣಾಕ್ಷಿ ಗಿರಿನಿವಾಸ ಪ್ರಾರ್ಥಿಸಿ,, ಗೌರವಧ್ಯಕ್ಷರಾದ ಗಿರಿಯಪ್ಪ ಗೌಡ ಶಾಂತಿಲ ಸ್ವಾಗತಿಸಿದರು, ಯುವ ವೇದಿಕೆ ಅಧ್ಯಕ್ಷರಾದ ದಿನೇಶ್ ಮಾಡ್ತೇಲು ವಂದಿಸಿದರು

- Advertisement -

Related news

error: Content is protected !!