Thursday, October 1, 2026
spot_imgspot_img
spot_imgspot_img

ಹೈಜಾಕ್ ಆತಂಕ ಮೆಟ್ಟಿ ನಿಂತ `ಹೀರೋ’ – ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಶ್ಲಾಘಿಸಿದ ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಹೊತ್ತಿರುವ ತನ್ನ ಸಹ-ಪೈಲಟ್ ವಿರುದ್ಧ ಹೋರಾಡಿ ವಿಮಾನವನ್ನು ರಕ್ಷಿಸಿದ “ಹೀರೋ” ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ಭಾರತಕ್ಕೆ ಅವರ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚರ್ ರಿಯಲ್‌ ಹೀರೋ. ಅಂತಹ ಗಂಭೀರ ಪರಿಸ್ಥಿತಿಯಲ್ಲಿ ಸ್ವತಃ ತಾವು ಗಾಯಗೊಂಡಿದ್ದರೂ ಕೂಡ ಪ್ರಯಾಣಿಕರನ್ನು ರಕ್ಷಿಸಲು ತೆಗೆದುಕೊಂಡ ನಿರ್ಧಾರ ಅವರ ಧೈರ್ಯವನ್ನು ತೋರಿಸುತ್ತದೆ. ಅವರ ಈ ಸಾಹಸವು ನೂರಾರು ಜನರ ಜೀವ ಉಳಿಸಲು ಮತ್ತು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ಭಾರತಕ್ಕೆ ಕ್ಯಾಪ್ಟನ್ ಮಚ್ಚರ್ ಬಗ್ಗೆ ಹೆಮ್ಮೆಯಿದೆ.

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಕಡೆಗೆ ಹಾರಾಟ ನಡೆಸುತ್ತಿತ್ತು. ಟೇಕಾಫ್ ಆದ ಸುಮಾರು ಎರಡು ಗಂಟೆಗಳ ನಂತರ ಕಾಕ್‌ಪಿಟ್ ಒಳಗೆ ಇಬ್ಬರು ಪೈಲಟ್‌ಗಳ ನಡುವೆ ತೀವ್ರ ಸಂಘರ್ಷ ಶುರುವಾಗಿದೆ.ಓಮನ್ ಪ್ರಜೆಯಾಗಿರುವ ಸಹ-ಪೈಲಟ್, ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ದಾಳಿಯಿಂದ ರಕ್ತಸಿಕ್ತವಾಗಿ ತೀವ್ರ ಗಾಯಗೊಂಡರೂ ಕ್ಯಾಪ್ಟನ್ ಸ್ಮಿತ್ ಅದ್ಭುತ ಧೈರ್ಯ ತೋರಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕಾಕ್‌ಪಿಟ್‌ನಿಂದ ಭಾರಿ ಚೀರಾಟ ಮತ್ತು ಗಲಾಟೆ ಕೇಳಿಬಂದ ತಕ್ಷಣವೇ ಎಚ್ಚೆತ್ತ ವಿಮಾನ ಸಿಬ್ಬಂದಿ ಹಾಗೂ ಕೆಲ ಧೈರ್ಯಶಾಲಿ ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

- Advertisement -

Related news

error: Content is protected !!