

ಪುತ್ತೂರು : ದಕ್ಷಿಣ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿರುದ್ಧ ಕೋಮು ಭಾವನೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಸದಾ ಪ್ರಚಾರ ಮಾಡುವ, ಹಿಂದೂ ಫೈರ್ ಬ್ಯಾಂಡ್ ಎಂದೇ ಪ್ರಸಿದ್ಧರಾದ ಶ್ರೀಕಾಂತ್ ಶೆಟ್ಟಿ ವಿರುದ್ಧ ಈ ಪ್ರಕರಣ ದಾಖಲಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಇದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈವಾಡವಿದ್ದು, ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಮನ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಮಾಡುತ್ತಿದೆ ಎಂದು ಹಿಂದೂಗಳು ಸಿಡಿದೆದ್ದಿದ್ದಾರೆ. ಪ್ರತಿಭಟನೆ ನಡೆದು ಒಂದು ತಿಂಗಳು ಕಳೆದ ಮೇಲೆ ನೋಟೀಸ್ ಜಾರಿಗೊಳಿಸಿರುವುದು ಇದೀಗ ಸಾರ್ವಜನಿಕರಲ್ಲೇ ರಾಜ್ಯ ಸರ್ಕಾರದ ನಡೆಯ ಕುರಿತು ಅನುಮಾನ ಮೂಡಿಸುವಂತಿದೆ.
ಇನ್ನು ನೋಟೀಸ್ನಲ್ಲಿ ಈ ಭಾಷಣದ ಕುರಿತು ಪುತ್ತೂರಿನ ರಿಯಾಜ್, ಪುರುಷರಕಟ್ಟೆಯ ಝುಬೆರ್, ಜಮಾಲ್ ಮತ್ತು ಸುಚೆಲ್ಗೆ ದೂರು ನೀಡಿದ್ದು, ದೂರು ನೀಡಲು ಅವರೆಷ್ಟು ಯೋಗ್ಯರು ಎಂಬುದು ತಮಗೆ ತಿಳಿದಿದೆ ಎಂದು ಶ್ರೀಕಾಂತ್ ಶೆಟ್ಟಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರು ಚಲೋ ಪ್ರತಿಭಟನೆಯಲ್ಲಿ ಕೋಮು ಭಾನವನೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿದ್ದಾರೆಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ನೋಟೀಸ್ನಲ್ಲಿ ವರದಿಯಾಗಿದೆ. ಇನ್ನು ಈ ಕುರಿತು ಕರ್ನಾಟಕ ರಾಜ್ಯ ಪೊಲೀಸ್, ಭಾರತೀಯ ನಾಗರಿಕಾ ಸುರಕ್ಷಾ ಸಂಹಿತೆ 173ರ ಕೆಳಗೆ ನೀಡಿದ ನೋಟಿಸ್ನಲ್ಲಿ ಭಾಷಣದ ಕೆಲವೊಂದು ಅಂಶಗಳನ್ನು ಉಲ್ಲೇಖಿಸಿ ನೋಟೀಸ್ ನೀಡಲಾಗಿದೆ.
ಇಂತಹ ನೋಟೀಸ್ಗಳು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವೇ? ಬೇರೆ ಧರ್ಮದವರು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಭಾಷಣ ಮಾಡಿದರೂ ಯಾವುದೇ ನೋಟೀಸ್ ನೀಡದೆ ಕೇವಲ ಹಿಂದೂಗಳಿಗೆ ಮಾತ್ರ ಇಂತಹ ನೋಟೀಸ್ ಜಾರಿಗೊಳಿಸಿ ಒಂದು ಧರ್ಮವನ್ನೇ ಹತ್ತಿಕ್ಕುವ ಕಾರ್ಯ ಕಾಂಗ್ರೆಸ್ನಿಂದ ನಡೆಯುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.








