Monday, October 5, 2026
spot_imgspot_img
spot_imgspot_img

ಕುಂಬಳೆ: ಕೋಳಿ ತ್ಯಾಜ್ಯದ ಕಾರ್ಖಾನೆಯಲ್ಲಿ ಅವಘಡ; ಗುಂಡಿಗೆ ಬಿದ್ದು ಒಡಿಶಾ ಮೂಲದ ಯುವಕ ಮೃತ್ಯು..!

- Advertisement -
- Advertisement -

ಕಾಸರಗೋಡು: ಕುಂಬಳೆ ಅನಂತಪುರದ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಯುವಕನೋರ್ವ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಒಡಿಶಾ ಮೂಲದ ಮಹೇಶ್ವರ್(19) ಎಂದು ಗುರುತಿಸಲಾಗಿದೆ. ಗಾಯಗೊಂಡ ತಾನೂಜಿ (24) ಅವರ ಸ್ಥಿತಿ ಗಂಭೀರವಾಗಿದೆ. ಸಿದ್ಧಾನಂದ (21) ಕೂಡ ಗಾಯಗೊಂಡಿದ್ದಾರೆ.

ಅನಂತಪುರ ಕೈಗಾರಿಕಾ ಎಸ್ಟೇಟ್‌ನ ಆಕ್ಸಿಜನ್ ಪ್ರೊಮ್ಯಾಕ್ಸ್ ಕಾರ್ಖಾನೆಯಲ್ಲಿ ರವಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಅಪಘಾತ ನಡೆದಿದೆ. ಕೋಳಿ ತ್ಯಾಜ್ಯದಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆ ಇದಾಗಿದೆ.

ಕಾರ್ಖಾನೆಯ ಬಾಯ್ಲರ್‌ನಿಂದ ಅನಿಲವು ಇದ್ದಕ್ಕಿದ್ದಂತೆ ತೀವ್ರ ರಭಸದಿಂದ ಹೊರಚೆಲ್ಲಿದೆ. ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಮಹೇಶ್ವರ್ ಅವರು ಕೋಳಿ ತ್ಯಾಜ್ಯದಿಂದ ತುಂಬಿದ್ದ ಆಳವಾದ ಗುಂಡಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಮಹೇಶ್ವರ್ ಗುಂಡಿಗೆ ಬಿದ್ದಿದ್ದನ್ನು ಕಂಡ ತನೂಜಿ ಮತ್ತು ಸಿದ್ಧಾನಂದ ತಕ್ಷಣವೇ ಅವರನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಅವರಿಗೂ ಗಾಯಗಳಾಗಿವೆ. ತಕ್ಷಣವೇ ಇತರ ಕಾರ್ಮಿಕರು ಮೂವರನ್ನೂ ಗುಂಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!