Thursday, October 8, 2026
spot_imgspot_img
spot_imgspot_img

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ 2 ಕೋಟಿ ರೂ. ವಂಚನೆ: ಪ್ರಕರಣ ದಾಖಲು

- Advertisement -
- Advertisement -

ಮಂಗಳೂರು, ಅ.7: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 75 ವರ್ಷ ಪ್ರಾಯದ ಮಹಿಳೆಗೆ ಸೈಬ‌ರ್ ಆರೋಪಿಗಳು 2 ಕೋಟಿ ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೈಬ‌ರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.25ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನನ್ನು ಬಾಂಬೆ ಕೊಲೊಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಮನಿ ಲ್ಯಾಂಡರಿಂಗ್, ಡ್ರಗ್ ವ್ಯವಹಾರ ಮತ್ತು ಮಕ್ಕಳ ಕಳ್ಳ ಸಾಗಣೆಯಂತಹ ಅಪರಾಧ ಕೃತ್ಯಗಳಲ್ಲಿ ನರೇಶ್ ಗೋಯಲ್ ಎಂಬ ಅಂತಾರಾಷ್ಟ್ರೀಯ ಮನಿ ಲ್ಯಾಂಡರಿಂಗ್ ಆರೋಪಿಯೊಂದಿಗೆ ನೀವು ಭಾಗಿಯಾಗಿದ್ದು, ಬಾಂಬೆ ಕೊಲೊಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದ. ಬಳಿಕ ಯಾರೋ ತನಗೆ ವಾಟ್ಸ್‌ಆ್ಯಪ್ ಮೂಲಕ ವಿಡಿಯೋ ಕಾಲ್ ಮಾಡಿ ತಾನು ಸಮಾಧಾನ್ ಪವಾರ್‌ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ತನ್ನೊಂದಿಗೆ ಜಡ್ಜ್ ಚಂದ್ರಚೂಡ ಎಂಬವರು ಸಹಾಯ ಮಾಡುವುದಾಗಿ ಹೇಳಿ ನೀವು ಅಂತರಾಷ್ಟ್ರೀಯ ಮಟ್ಟದ ಅಪರಾಧ ಮಾಡಿದ್ದೀರಿ. ಸುಪ್ರೀಂ ಕೋರ್ಟ್‌ ನ್ಯಾಷನಲ್ ಸೀಕ್ರೆಸ್ ಆ್ಯಕ್ಟ್ ಪಾಲಿಸಬೇಕಾಗಿದೆ ಎಂದು ಹೇಳಿದ್ದ.ಆತಂಕಗೊಂಡ ತಾನು ಈ ವಿಷಯವನ್ನು ಯಾರಿಗೂ ತಿಳಿಸಲಿಲ್ಲ. ಆಸ್ತಿ ಮತ್ತು ಖಾತೆ ವಿವರವನ್ನು ಪರಿಶೀಲಿಸಿ 2 ದಿನದೊಳಗೆ ಕ್ಲಿಯರೆನ್ಸ್ ನೀಡುವುದಾಗಿ ಆರೋಪಿಗಳು ಹೇಳಿ ತನ್ನ ಬ್ಯಾಂಕ್ ಖಾತೆಗಳ ವಿವರ ಹಾಗೂ ಆಸ್ತಿ ವಿವರವನ್ನು ಪಡೆದುಕೊಂಡಿದ್ದರು.

ತಾನು ಎಲ್ಲಾ ವಿವರ ಸಲ್ಲಿಸಿದ ಬಳಿಕ ಅವರು ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ಮೊದಲು 60 ಲಕ್ಷ ರೂ., ಬಳಿಕ 1.40 ಕೋ. ರೂ. ಹೀಗೆ ಸೆ.25ರಿಂದ ಅ.5ರ ನಡುವೆ 2 ಕೋ.ರೂ. ವರ್ಗಾಯಿಸಿದ್ದೆ. ಕೊನೆಗೆ ತನ್ನ ಗೆಳೆಯರೊಬ್ಬರಿಗೆ ಈ ವಿಚಾರ ತಿಳಿಸಿದಾಗ ತಾನು ಮೋಸ ಹೋಗಿರುವುದು ತಿಳಿದಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.ಅದರಂತೆ ಪ್ರಕರಣ ಕೈಗೆತ್ತಿಕೊಂಡ ಸೈಬರ್ ಠಾಣೆಯ ಪೊಲೀಸರು ನಡೆಸುತ್ತಿದ್ದಾರೆ.

- Advertisement -

Related news

error: Content is protected !!