

ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಮತ್ತೊಂದು ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಗರ ಠಾಣಾ ಅ.ಕ್ರ ನಂ. 163/2009 ಕಲಂ 11,13,32,33,34,38(a),43 KE Act ಪ್ರಕರಣದಲ್ಲಿ ACJ & JMFC ನ್ಯಾಯಾಲಯ ಬಂಟ್ವಾಳ LPC 01/2023 ರಂತೆ LPC ವಾರೆಂಟ್ ಹೊರಡಿಸಿತ್ತು. ಹಾಗೆಯೇ ಬಂಟ್ವಾಳ ನಗರ ಠಾಣಾ ಅ.ಕ್ರ 143/2023 ಕಲಂ 143,147,448,427,436,307,149 IPC ಪ್ರಕರಣದಲ್ಲಿಯೂ ವಾರೆಂಟ್ ಆರೋಪಿಯಾಗಿದ್ದ ಹನೀಫ್ @ ಕೊಕ್ಕಡ ಹನೀಫ್ (57) ಎಂಬಾತ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಠಾಣಾ ವಾರೆಂಟ್ ಸಿಬ್ಬಂದಿ ಜಗದೀಶ್ ರವರು ಮಾಹಿತಿ ಕಲೆಹಾಕಿ, ದಿನಾಂಕ 09/10/2026 ರಂದು ಮೂಡಬಿದ್ರೆಯ ಶಿರ್ತಾಡಿಯಲ್ಲಿ ಬಂಟ್ವಾಳ ನಗರ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು (ಕಾ & ಸು) ರವರ ಮಾರ್ಗದರ್ಶನದಲ್ಲಿ ASI ಬಶೀರ್, HC ಜಗದೀಶ್, ಸಂತೋಷ್, PC ಗವಿ ಸಿದ್ದಪ್ಪ ರವರು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.








