


ಪುತ್ತೂರು: ಕೋಡಿಂಬಾಡಿಯ ಶಿವ ಕಾಂಪ್ಲೆಕ್ಸ್ನಲ್ಲಿ ಅ.21ರಂದು ಶುಭಾರಂಭಗೊಳ್ಳಲಿರುವ ಅಕ್ಕರೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.)ಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆನ್ನು ಶಾಸಕರಾದ ಅಶೋಕ್ ಕುಮಾರ್ ರೈ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.11ರಂದು ಬಿಡುಗಡೆಗೊಳಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್, ಗ್ಯಾರಂಟಿ ಯೋಜನೆಯ ಪುತ್ತೂರು ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸತೀಶ್ ನಾಯಕ್ ಮೋನಡ್ಕ, ದೇವದಾಸ ಗೌಡ ಪಿಲಿಗುಂಡ, ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು, ರಮೇಶ್ ನಾಯಕ್ ನಿಡ್ಯ, ಪುತ್ತೂರು ಗಣೇಶ್ ಬೀಡಿ ವರ್ಕ್ಸ್ನ ವ್ಯವಸ್ಥಾಪಕರಾದ ಚಂದ್ರ ಬದಿನಾರು, ಅಕ್ಕರೆ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಪ್ರವರ್ತಕರಾದ ಜಯಪ್ರಕಾಶ್ ಬದಿನಾರು, ನಿರ್ದೇಶಕರಾದ ಗಣೇಶ್ ಹೆಗ್ಡೆ, ಬಾಲಚಂದ್ರ ಗೌಡ ಬಾರ್ತಿಕುಮೇರು, ಶ್ರದ್ಧಾ ಸುದೇಶ್ ಶೆಟ್ಟಿ ಶಾಂತಿನಗರ, ಸುಭಾಸ್ ನಾಯಕ್ ನೆಕ್ಕರಾಜೆ, ಗಂಗಾಧರ್ ನಾಯ್ಕ್ ಮಿತ್ತಳಿಕೆ, ಕಾರ್ಯನಿರ್ವಹಣಾಧಿಕಾರಿ ವಿನುತಾ ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.








