- Advertisement -
- Advertisement -



ಚಿಕ್ಕಬಳ್ಳಾಪುರ: ಊಟ ಮಾಡಿ ಮಲಗಿದ್ದ ಮೂರು ವರ್ಷದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕು ಜರಬಂಡಹಳ್ಳಿಯಲ್ಲಿ ನಡೆದಿದೆ.
ನವೀನ್ ಮತ್ತು ಹಂಸಲೇಖ ದಂಪತಿಯ ಪುತ್ರ ರಿತೀಶ್ (3) ಮೃತಪಟ್ಟ ಮಗು. ಮಗು ಎಂದಿನಂತೆ ಊಟ ಮಾಡಿ ಮಲಗಿತ್ತು ಎನ್ನಲಾಗಿದ್ದು, ಬಳಿಕ ಎಚ್ಚರಗೊಳ್ಳದೆ ಮೃತಪಟ್ಟಿದೆ. ಮಗುವಿನ ದಿಢೀರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಣ್ಣೆದುರೇ ಆಟವಾಡಿಕೊಂಡು ಇರಬೇಕಿದ್ದ ಪುಟ್ಟ ಕಂದನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮಗುವಿನ ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
- Advertisement -






