Monday, October 19, 2026
spot_imgspot_img
spot_imgspot_img

ಬಂಟ್ವಾಳ: ಸಿದ್ದಕಟ್ಟೆಯಲ್ಲಿ ಯುವಕನಿಗೆ ಚೂರಿ ಇರಿತ – 6 ಮಂದಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ: ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ರವಿವಾರ ರಾತ್ರಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.

ಬಂಟ್ವಾಳ ಸಂಗಬೆಟ್ಟು ನಿವಾಸಿ ಗಣೇಶ್ (34) ಎಂಬವರು ನೀಡಿದ ದೂರಿನಂತೆ, ಅ. 18 ರಂದು ರಾತ್ರಿ ವೇಳೆ ಅವರು ತಮ್ಮ ಸಹೋದರ ಪ್ರಕಾಶ್ ಹಾಗೂ ಇತರ 5 ಮಂದಿ ಗೆಳೆಯರೊಂದಿಗೆ ಸಿದ್ದಕಟ್ಟೆ ಜಂಕ್ಷನ್‌ನಲ್ಲಿ ನಿಂತಿದ್ದರು .ಈ ವೇಳೆ ಅಲ್ಲಿಗೆ ಬಂದ ಆರೋಪಿಗಳಾದ ಅಕ್ಷಿತ್, ಕಿರಣ್ @ ರಂಜು, ಅಜೀತ್, ಧನುಷ್, ಸಂತೋಷ್ ಹಾಗೂ ರಾಜು ಎಂಬವರು ಸ್ವಲ್ಪ ಮುಂದೆ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ, ದೂರುದಾರರ ಸಹೋದರ ಪ್ರಕಾಶ್ ಅವರನ್ನು ಕರೆದಿದ್ದಾರೆ. ಪ್ರಕಾಶ್ ಅವರು ಆರೋಪಿಗಳ ಬಳಿ ತೆರಳಿದಾಗ, ಅವರೆಲ್ಲ ಸೇರಿ ಹಲ್ಲೆ ನಡೆಸಿದ್ದಾರೆ.

ಆರೋಪಿಗಳ ಪೈಕಿ ಅಕ್ಷಿತ್ ಎಂಬಾತ ಚೂರಿಯಿಂದ ಪ್ರಕಾಶ್ ಅವರಿಗೆ ಹಲವು ಬಾರಿ ಇರಿದಿದ್ದಾನೆ. ಗಾಯಗೊಂಡ ಪ್ರಕಾಶ್ ಅವರನ್ನು ದೂರುದಾರರು ಹಾಗೂ ಇತರರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 141/2026, ಕಲಂ 189(2), 191(2), 115(2), 118(1), 352, 351(2), 109 ಜೊತೆಗೆ 190 BNS 2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!