Tuesday, October 20, 2026
spot_imgspot_img
spot_imgspot_img

ವೈವಾಹಿಕ ಕಲಹ | ಗುಜರಾತ್ ಅಂಚೆ ಇಲಾಖೆ ಉದ್ಯೋಗಿ ಆತ್ಮಹತ್ಯೆ-1700 ಅಡಿ ಆಳದ ಕಂದಕಕ್ಕೆ ಹಾರುವ ಮುನ್ನ 13 ನಿಮಿಷಗಳ ವಿಡಿಯೊ ದಾಖಲು

- Advertisement -
- Advertisement -

ಅಹಮದಾಬಾದ್‌: ವೈವಾಹಿಕ ಕಲಹದಿಂದ ಉಂಟಾದ ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಗುಜರಾತ್‌ನ ಅಂಚೆ ಇಲಾಖೆ ಉದ್ಯೋಗಿಯೊಬ್ಬರು ಮಹಾರಾಷ್ಟ್ರದ ಹರಿಶ್ಚಂದ್ರಗಢದ ಕೊಂಕಣಕಡಾ ಪ್ರಪಾತದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತರನ್ನು ಗುಜರಾತ್‌ನ ಭಾವನಗರದ ನಿವಾಸಿ, ಟಿಂಬಾ ಅಂಚೆ ಕಚೇರಿಯ ಉದ್ಯೋಗಿ ವಿಶ್ವರಾಜ್ ಗೋಹಿಲ್ (30) ಎಂದು ಗುರುತಿಸಲಾಗಿದೆ. ಅಕ್ಟೋಬರ್ 12ರಂದು ಈ ಘಟನೆ ನಡೆದಿದ್ದು, ಸಾವಿಗೂ ಮುನ್ನ ಅವರು ದಾಖಲಿಸಿದ್ದ 13 ನಿಮಿಷಗಳ ವಿಡಿಯೊ ಇದೀಗ ವೈರಲ್ ಆಗಿದೆ.ಫೆಬ್ರವರಿ 8, 2026ರಂದು ವಿಶ್ವರಾಜ್ ಮತ್ತು ಧಾರಾಬಾ ಸರ್ವೈಯಾ ವಿವಾಹವಾಗಿದ್ದರು. ದಂಪತಿ ನಡುವಿನ ವೈವಾಹಿಕ ವಿವಾದದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12ರಂದು ಪತ್ನಿ ಕೌಟುಂಬಿಕ ಹಿಂಸೆಯ ಆರೋಪದಡಿ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದು, ಅಕ್ಟೋಬರ್ 9ರಂದು ವಿಶ್ವರಾಜ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಸಾವಿಗೂ ಮುನ್ನ ದಾಖಲಿಸಿದ ವಿಡಿಯೊದಲ್ಲಿ ವೈವಾಹಿಕ ವಿವಾದದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದ ಅವರು, ವೈವಾಹಿಕ ವಿವಾದಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆ ತರಬೇಕು ಎಂದು ಮನವಿ ಮಾಡಿದ್ದರು.

ಅಲ್ಲದೆ, ಪತ್ನಿ ಮತ್ತು ಆಕೆಯ ಕುಟುಂಬದವರ ವಿರುದ್ಧ ಆರೋಪಗಳನ್ನು ಮಾಡಿದ್ದರು.ಪ್ರಪಾತದ ಬಳಿ ವಿಶ್ವರಾಜ್ ಅವರ ದ್ವಿಚಕ್ರ ವಾಹನ ಮತ್ತು ಮೊಬೈಲ್ ಫೋನ್ ಪತ್ತೆಯಾದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊಬೈಲ್ ಮೂಲಕ ಕುಟುಂಬದವರನ್ನು ಸಂಪರ್ಕಿಸಿದಾಗ ವಿಡಿಯೊದ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ.ಸುಮಾರು 1,700 ಅಡಿ ಆಳದ ಕಂದಕದಲ್ಲಿ ಬಿದ್ದಿದ್ದ ಮೃತದೇಹವನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ನೆರವು ಪಡೆದಿದ್ದು, ಪರ್ವತಾರೋಹಿಗಳ ಸಹಕಾರದೊಂದಿಗೆ ಸುಮಾರು 24 ಗಂಟೆಗಳ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ.ಈ ಸಂಬಂಧ ಮಹಾರಾಷ್ಟ್ರದ ಟೋಕಾವಡೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ಮೃತರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡು, ವಿಡಿಯೊ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಶೀತಲ್‌ಕುಮಾರ್ ನಾಯಕ್ ತಿಳಿಸಿದ್ದಾರೆ.

- Advertisement -

Related news

error: Content is protected !!