Monday, October 26, 2026
spot_imgspot_img
spot_imgspot_img

ಒಂಟಿ ವೃದ್ಧೆಯ ಬರ್ಬರ ಹತ್ಯೆ; ಬೀರುವಿನಲ್ಲಿದ್ದ ಚಿನ್ನಾಭರಣ ಲೂಟಿ

- Advertisement -
- Advertisement -

ಬೆಂಗಳೂರು: ಒಂಟಿ ವೃದ್ಧೆಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಅದೇ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ಬ್ಯಾಟರಾಯನಪುರದ ಹೊಸಗುಡ್ಡದಹಳ್ಳಿಯಲ್ಲಿ ನಡೆದಿದೆ.

ವೆಂಕಟಲಕ್ಷ್ಮಮ್ಮ(70) ಕೊಲೆಯಾದ ವೃದ್ಧೆ. ಇವರು ಮನೆಯಲ್ಲಿ ಒಬ್ಬರೇ ವಾಸಮಾಡುತಿದ್ದರು. ಶನಿವಾರ (ಅ.24) ಸಂಜೆ ದುಷ್ಕರ್ಮಿಗಳು ವೃದ್ಧೆಯ ತಲೆ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಬಳಿಕ ಮನೆಯಲ್ಲಿದ್ದ ಬೀರು ಒಡೆದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ವೃದ್ಧೆಯ ತಲೆ, ಕತ್ತಿನ ಭಾಗದಲ್ಲಿ ಗಾಯಗಳಾಗಿವೆ.

ಹತ್ಯೆಯಾದ ವೃದ್ಧೆ ನಾಲ್ಕು ಮನೆಗಳನ್ನು ಹೊಂದಿದ್ದರು. ಒಂದು ಮನೆಯಲ್ಲಿ ಅವರು ವಾಸವಾಗಿದ್ದರು. ಉಳಿದ ಎರಡು ಮನೆಗಳು ಖಾಲಿ ಇದ್ದವು. ಮತ್ತೊಂದು ಮನೆಯನ್ನು ಓರ್ವ ಯುವಕ ಬಾಡಿಗೆಗೆ ಪಡೆದು ಸೌಂಡ್ಸ್ ಸಿಸ್ಟಮ್‌ಗಳನ್ನು ಸ್ಟೋರ್ ಮಾಡಿದ್ದ. ಮನೆಯನ್ನೇ ಗೋಡನ್ ರೀತಿ ಬಳಸುತಿದ್ದ. ತಿಂಗಳಿಗೊಮ್ಮೆ ವೃದ್ಧೆಗೆ ಬಾಡಿಗೆ ಜೊತೆಗೆ ಮಾತ್ರೆ ತಂದು ಕೊಡುತ್ತಿದ್ದ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಯುವಕ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿ ದೂರು ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ಪರಿಶೀಲಿಸಿ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!