Monday, October 26, 2026
spot_imgspot_img
spot_imgspot_img

ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕದ ವತಿಯಿಂದ ಮಾತೃ ಧ್ಯಾನ ಮಾತೃ ವಂದನಾ ಮಾತೃ ಭೋಜನ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶಾಖೆ ಮುಳಿಯ-ದಂಬೆ ವತಿಯಿಂದ ಕಳೆದ 56 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಅ. 25 ರಂದು ಮಾತೃ ವಂದನಾ, ಮಾತೃ ಧ್ಯಾನ ಹಾಗೂ ಮಾತೃಭೋಜನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಲಕ್ಷ್ಮಿ ಅಕ್ಕ, ಶಿಕ್ಷಕರು ಶ್ರೀ ದುರ್ಗಾಪರಮೇಶ್ವರಿ ಶಾಖೆ ಅಡ್ಯನಡ್ಕ ವಹಿಸಿದ್ದರು. ಮುಖ್ಯ ಮಾತುಗಾರರಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ಜಿಲ್ಲಾ ಸಹ ಸಂಚಾಲಕರಾದ(ಮಾತೆಯರ ವಿಭಾಗ) ಶ್ರೀಮತಿ ಮಾಧುರಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಲತಾ , ಶಿಕ್ಷಕರು ಬೊಳಂತಿಮೊಗರು ಉಪಸ್ಥಿತರಿದ್ದರು.

ಮುಖ್ಯ ಮಾತುಗಾರರಾದ ಶ್ರೀಮತಿ ಮಾಧುರಿ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ನೀಡುವ ಪ್ರೀತಿ, ತ್ಯಾಗ, ಸಂಸ್ಕಾರ ಹಾಗೂ ಮಮತೆಯನ್ನು ಜೀವನದುದ್ದಕ್ಕೂ ಸ್ಮರಿಸಬೇಕು. ಹೆತ್ತವರನ್ನು ಹಾಗೂ ಹಿರಿಯರನ್ನು ಸದಾ ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದ್ದು, ಮಾತೃ–ಪಿತೃ ಭಕ್ತಿಯೊಂದಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಮತ್ತು ಮಾತೃ ಧ್ಯಾನ ನಡೆಸಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗ ತರಬೇತಿ ಪಡೆಯುತ್ತಿರುವ ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 300 ಮಂದಿ ಭಾಗವಹಿಸಿದ್ದರು.

ವಿಶೇಷವಾಗಿ ಯೋಗಪಟುಗಳೇ ತಮ್ಮ ಮನೆಗಳಿಂದ ವಿವಿಧ ರೀತಿಯ ಸಾತ್ವಿಕ ಆಹಾರವನ್ನು ಸಿದ್ಧಪಡಿಸಿ ತಂದು, ಪರಸ್ಪರ ಪ್ರೀತಿಯಿಂದ ಹಂಚಿಕೊಂಡು ಮಾತೃಭೋಜನವನ್ನು ವಿಶಿಷ್ಟವಾಗಿ ಆಚರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೈತುತ್ತಿನ ಮೂಲಕ ಆಹಾರವನ್ನು ಪರಸ್ಪರ ವಿತರಿಸುವ ಮೂಲಕ ಮಾತೃಭೋಜನ ಕಾರ್ಯಕ್ರಮವು ಆತ್ಮೀಯವಾಗಿ ಸಂಪನ್ನಗೊಂಡಿತು.

ತುಳಸಿ, ಆನಂದ, ಸುಗುಣ ಸುರೇಶ, ಗೀತಾ.ವಿನೋದ, ರಾಮ ಅಣ್ಣ ,ಮೋಹನದಾಸ, ಹರೀಶ.ಇವರುಗಳು ಯೋಗ ತರಗತಿಯಿಂದ ತಮಗಾದ ಅನುಭವವನ್ನು ಹಂಚಿಕೊಂಡರು.

ವಿಟ್ಲ ನಗರದ ಎಲ್ಲಾ ಶಾಖೆಯ ಯೋಗ ಬಂಧುಗಳು ,ನಗರ ಪ್ರಮುಖರು,ಬೆಳ್ತಂಗಡಿ ಶಾಖೆಯ ಯೋಗ ಬಂಧು,ಜಲ್ಲಾ ಪ್ರಮುಖರು ಭಾಗವಹಿಸಿದರು.

ಮಾತೃವಂದನಾ, ಮಾತೃಭೋಜನದಂತಹ ಕಾರ್ಯಕ್ರಮಗಳ ಮೂಲಕ ತಾಯಿಯ ಮಹತ್ವವನ್ನು ಅರಿಯುವುದರ ಜೊತೆಗೆ ಕುಟುಂಬದ ಹಿರಿಯರನ್ನು ಗೌರವಿಸುವ ಸಂಸ್ಕಾರ, ಪರಸ್ಪರ ಪ್ರೀತಿ, ಆತ್ಮೀಯತೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂದೇಶವನ್ನು ಕಾರ್ಯಕ್ರಮ ಸಾರಿತು. ಆರಂಭದಲ್ಲಿ ಭಜನೆ ಹಾಗೂ ಕೊನೆಯಲ್ಲಿ ಸಾಮೂಹಿಕ ಪ್ರಸಾದವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ಸುಧಾ ನಿರೂಪಿಸಿ, ಕುಮಾರಿ ವಂಶಿ ಪ್ರಾರ್ಥಿಸಿ, ಶ್ರೀಮತಿ ಜಯಲಕ್ಷ್ಮಿ ಅಕ್ಕ ಸ್ವಾಗತಿಸಿದರು. ಶ್ರೀಮತಿ ಹರಿಣಾಕ್ಷಿ 48 ದಿನಗಳ ಶಾಖೆಯ ವರದಿ ವಾಚನ ಮಾಡಿದರು. ಶ್ರೀಮತಿ ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.

- Advertisement -

Related news

error: Content is protected !!