Thursday, October 29, 2026
spot_imgspot_img
spot_imgspot_img

ಮಂಗಳೂರು: ಜಪ್ಪಿನಮೊಗರಿನ ಬಳಿ ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ ವಶಕ್ಕೆ, ಚಾಲಕನ ವಿರುದ್ಧ ಕ್ರಮ

- Advertisement -
- Advertisement -

ಮಂಗಳೂರು: ಅ .22 ರಂದು ರಾತ್ರಿ 7:50 ಗಂಟೆಗೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು, ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 30-35 ವರ್ಷದ ಅಪರಿಚಿತ ಯುವಕನಿಗೆ KA-19-AA-8499 ನೋಂದಣಿಯ ಬಸ್ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿತ್ತು.

ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡ ಪಾದಚಾರಿಯನ್ನು ಸ್ಥಳೀಯರು ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ.ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. 285/2026, ಕಲಂ 281, 106(1) BNS ಹಾಗೂ 134(a)(b) IMV ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿ ಪರಿಶೀಲನೆ ವೇಳೆ ಅಪಘಾತಕ್ಕೆ ಕಾರಣವಾಗಿದ್ದು 42ನೇ ರೂಟ್ ನಲ್ಲಿ ಸಂಚರಿಸುವ ‘SRI KATEEL’ ಹೆಸರಿನ ಬಸ್ ಎಂದು ಪತ್ತೆಯಾಗಿದ್ದು, ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ಸನ್ನು ಕಾಸರಗೋಡು ನಿವಾಸಿ ಸುಧೀರ್ ಕೆ. (40) ಚಲಾಯಿಸುತ್ತಿದ್ದು, ಆತನ ಚಾಲನಾ ಪರವಾನಗಿ ಚಾಲ್ತಿಯಲ್ಲಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರ ಹೇಳಿಕೆ, ಮೊಬೈಲ್ ಲೊಕೇಶನ್ ಸೇರಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

- Advertisement -

Related news

error: Content is protected !!