Friday, October 30, 2026
spot_imgspot_img
spot_imgspot_img

ಬಾಂಗ್ಲಾದೇಶ ಮಾಜಿ ವಾಯುಪಡೆ ಅಧಿಕಾರಿ ನಿಗೂಢ ಸಾವು; ನದಿಯಲ್ಲಿ ಪತ್ತೆಯಾದ ಮೃತದೇಹ

- Advertisement -
- Advertisement -

ಢಾಕಾ: ಶೇಖ್ ಹಸೀನಾ ಪಲಾಯನದ ವೀಡಿಯೊ ಮಾಡಿ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಕೆ.ಎಂ.ತಹಸಿಫ್ ಸೌರಿ ಅವರ ಮೃತದೇಹವು ನಾಪತ್ತೆಯಾದ ಮರುದಿನವೇ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಢಾಕಾದ ಉತ್ತರ್‌ಖಾನ್ ಪ್ರದೇಶದಲ್ಲಿರುವ ರಾಜಬಾರಿ ಘಾಟ್ ಬಳಿ, ರಾಷ್ಟ್ರೀಯ ತುರ್ತು ಸಹಾಯವಾಣಿಗೆ ಬಂದ ಕರೆಯ ಮೇರೆಗೆ ನದಿಯಲ್ಲಿ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2024ರಲ್ಲಿ ಪದಚ್ಯುತಗೊಂಡಿದ್ದ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುತ್ತಿರುವ ದೃಶ್ಯವಿದ್ದ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ ಆರೋಪ ಇವರ ಮೇಲಿತ್ತು. ಈ ವೀಡಿಯೊವೊಂದನ್ನು ಪೋಸ್ಟ್ ಮಾಡಿದಾಗಿನಿಂದ ತಹಸಿಫ್‌ಗೆ ಕಿರುಕುಳ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

2024ರ ಆ.5 ರಂದು ಶೇಖ್ ಹಸೀನಾ ಅವರು ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಬಾಂಗ್ಲಾದೇಶದಿಂದ ಪಲಾಯನ ಮಾಡುತ್ತಿದ್ದ ದೃಶ್ಯವನ್ನು ತಹಸಿಫ್ ಅಪ್‌ಲೋಡ್ ಮಾಡಿದ್ದರು ಎನ್ನಲಾಗಿದೆ. ಆದರೆ, ಅವನು ಕೇವಲ ಒಬ್ಬ ಸಾಮಾನ್ಯ ನಾಗರಿಕನಾಗಿ ಆ ವೀಡಿಯೊ ಪೋಸ್ಟ್ ಮಾಡಿದ್ದ ಅಷ್ಟೇ ಎಂದು ಕುಟುಂಬದವರು ತಿಳಿಸಿದ್ದಾರೆ.

- Advertisement -

Related news

error: Content is protected !!