


ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಪ್ರದೂಶ್ ರಾವ್ ಗೆ ಕರ್ನಾಟಕ ಹೈಕೋರ್ಟ್ ಆರು ದಿನಗಳ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಪ್ರದೂಶ್ ರಾವ್ ತನ್ನ ತಂದೆಯ ವಾರ್ಷಿಕ ತಿಥಿಯಲ್ಲಿ ಪಾಲ್ಗೊಳ್ಳಲು 20 ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಈ ಹಿಂದೆ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಆದರೆ ವಿಚಾರಣಾ ನ್ಯಾಯಾಲಯ ಪ್ರದೇಶ್ ಅರ್ಜಿಯನ್ನು ವಜಾ ಮಾಡಿತ್ತು.
ಈ ಹಿನ್ನಲೆ ಪ್ರದೂಶ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಅನಂತ ರಾಮನಾಥ್ ಹೆಗಡೆ ಅವರಿದ್ದ ಪೀಠ ಪ್ರದೂಶ್ ರಾವ್ ಗೆ ನವೆಂಬರ್ 7 ರಿಂದ 12 ರ ವರೆಗೂ ಷರತ್ತು ಬದ್ದ ಮಧ್ಯಂತರ ಜಾಮೀನು ನೀಡಿದೆ.ನವೆಂಬರ್ ಏಳರಂದು ಬೆಳಗ್ಗೆ 7 ಗಂಟೆಗೆ ಜೈಲಿನಿಂದ ಕರೆದುಕೊಂಡು ಹೋಗಬೇಕು, ಈ ವೇಳೆ ಸಿಬ್ಬಂದಿ ಭದ್ರತೆ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದವರ ಜೊತೆ ಮಾತನಾಡಲು ಅವಕಾಶ ನೀಡಬಾರದು. ಹಾಗೂ ನವೆಂಬರ್ 12 ರಂದು ಸಂಜೆ ಆರು ಗಂಟೆ ವೇಳೆಗೆ ಪರಪ್ಪನ ಆಗ್ರಹಾರಕ್ಕೆ ವಾಪಸ್ಸಾಗಬೇಕು ಎಂಬ ಷರತ್ತು ವಿಧಿಸಲಾಗಿದೆ.








