Friday, November 6, 2026
spot_imgspot_img
spot_imgspot_img

ಹಿರಿಯ ಭಾಷಾಶಾಸ್ತ್ರಜ್ಞ, ವಿಮರ್ಶಕ ಡಾ. ಕೆ.ವಿ. ನಾರಾಯಣ ನಿಧನ

- Advertisement -
- Advertisement -

ಬೆಂಗಳೂರು: ಕನ್ನಡ ಸಾಹಿತ್ಯ, ಭಾಷೆ ಮತ್ತು ವಿಮರ್ಶಾ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಹಿರಿಯ ಭಾಷಾಶಾಸ್ತ್ರಜ್ಞ, ಸಾಹಿತ್ಯ ಜಗತ್ತಿನಲ್ಲಿ ‘ಕೆವಿಎನ್’ ಎಂದೇ ಚಿರಪರಿಚಿತರಾಗಿದ್ದ ಪ್ರೊಫೆಸರ್ ಕೆ.ವಿ. ನಾರಾಯಣ್ ( 76) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನ ಯಲಹಂಕದ ಬಳಿ ವಾಸವಿದ್ದ ಪ್ರೊ. ಕಂಪಲಾಪುರ ವೀರಣ್ಣ ನಾರಾಯಣ್ ಅವರ ಆರೋಗ್ಯದಲ್ಲಿ ಗುರುವಾರ ತಡರಾತ್ರಿ ದಿಢೀರ್ ಏರುಪೇರಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಕೆವಿಎನ್ ಅವರು ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷರಾಗಿದ್ದರು.

ಮೃತರು ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!