- Advertisement -
- Advertisement -


ಪುತ್ತೂರು: ಶಾಂತಿಗೋಡು ಗ್ರಾಮದ ವೀರಮಂಗಲ ಶಾಲೆಯ ಎದುರು ಸ್ಕೂಟರ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ನಾಲ್ಕು ವರ್ಷದ ಬಾಲಕ ಗಾಯಗೊಂಡ ಘಟನೆ ನ.13ರಂದು ಸಂಜೆ ನಡೆದಿದೆ.ಗಡಿಪಿಲ ಕಡೆಯಿಂದ ವೀರಮಂಗಲ ಬಳಿ ಜೀಯಾದ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ವೀರಮಂಗಲ ಶಾಲೆಯ ಎದುರು ರಸ್ತೆ ದಾಟುತ್ತಿದ್ದ ಅಥರ್ವ ಬಿ. ಗೌಡ (4ವ) ಎಂಬ ಬಾಲಕನಿಗೆ ಡಿಕ್ಕಿಯಾಗಿದೆ.ಅಪಘಾತದ ಪರಿಣಾಮ ಬಾಲಕ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿದೆ. ಗಾಯಾಳುವನ್ನು ತಕ್ಷಣ ಪುತ್ತೂರಿನ ಸಿಟಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಬಾಲಕನ ಅಜ್ಜ ವೆಂಕಪ್ಪ ಗೌಡ ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








