Thursday, November 19, 2026
spot_imgspot_img
spot_imgspot_img

ಮಹಿಳಾ ಮಂಡಲ(ರಿ)ವಿಟ್ಲ 2026-27ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ಶ್ರೀಮತಿ ಕೆ. ಚಂದ್ರಕಾಂತಿ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀಮತಿ ಅಮಿತಾ ಕೃಷ್ಣ ಆಯ್ಕೆ

ವಿಟ್ಲ: ಮಹಿಳಾ ಮಂಡಲ (ರಿ.) ವಿಟ್ಲ ಇದರ 2026-27ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆಯಾಗಿದೆ. 62 ವರ್ಷಗಳ ಇತಿಹಾಸ ಹೊಂದಿರುವ ಮಹಿಳಾ ಮಂಡಲಕ್ಕೆ ಸ್ವಂತ ಕಟ್ಟಡವಿದ್ದು, ಪ್ರಸ್ತುತ 60-65 ಸದಸ್ಯರು ಇದ್ದಾರೆ.

ಮಂಡಲದ ವತಿಯಿಂದ ಹೊಲಿಗೆ ತರಬೇತಿ, ಜೇನು ಕೃಷಿ ತರಬೇತಿ, ವಿಶ್ವ ಮಹಿಳಾ ದಿನಾಚರಣೆ, ಆಟಿಡೊಂಜಿ ದಿನ, ದೀಪಾವಳಿ ಆಚರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮಗಳಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ. 10 ವರ್ಷಗಳ ಹಿಂದೆ ಮಹಿಳಾ ಮಂಡಲದ ವತಿಯಿಂದಲೇ ವರಮಹಾಲಕ್ಷ್ಮೀ ಪೂಜೆ ನಡೆಸಲಾಗುತ್ತಿತ್ತು ಎಂದು ಮಂಡಲದ ಪದಾಧಿಕಾರಿಗಳು ತಿಳಿಸಿದರು.

ವಿಟ್ಲ ಮಹಿಳಾ ಮಂಡಲ (ರಿ.) ಇದರ 2026-27ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಕೆ. ಚಂದ್ರಕಾಂತಿ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀಮತಿ ಅಮಿತಾ ಕೃಷ್ಣ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾ, ಕೋಶಾಧಿಕಾರಿಯಾಗಿ ಶ್ರೀಮತಿ ವಿಜಯಲಕ್ಷ್ಮಿ ಅವರು ಆಯ್ಕೆಯಾಗಿದ್ದಾರೆ.ಗೌರವ ಅಧ್ಯಕ್ಷರಾಗಿ ಶ್ರೀಮತಿ ಧರ್ಮಾವತಿ ಮತ್ತು ಶ್ರೀಮತಿ ಹೇಮಲತಾ ಸಾಲ್ಯಾನ್ ಅವರು, ಉಪಾಧ್ಯಕ್ಷರಾಗಿ ಶ್ರೀಮತಿ ವಿಮಲಾ ಪಿ. ಶೆಟ್ಟಿ ಮತ್ತು ಶ್ರೀಮತಿ ಸರಸ್ವತಿ ಅವರು ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುರ್ಗಾಂಬಿಕಾ, ಹರೀನಾಕ್ಷಿ, ಅಮಿತಾ ರೈ, ರಶ್ಮಿ ಹರೀಶ್, ಪ್ರಮೀಳಾ, ನಿಶಾ ಮತ್ತು ಪುಷ್ಪ ಅವರು ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!